ಈವರೆಗೆ ನೋಡಿದ್ದು ಕೇವಲ ಟ್ರೈಲರ್: ಸಿನಿಮಾ ಇನ್ನೂ ಬಾಕಿ ಇದೆ ಎಂದ ಪ್ರಧಾನಿ ಮೋದಿ
05/04/2024
ಹತ್ತು ವರ್ಷಗಳ ತನ್ನ ಆಡಳಿತದಲ್ಲಿ ನೀವು ನೋಡಿರುವುದು ಕೇವಲ ಟ್ರೈಲರ್ ಅನ್ನು ಮಾತ್ರ, ಸಿನಿಮಾ ಇನ್ನೂ ಬಾಕಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈಗ ಮಾಡಿರುವುದಕ್ಕಿಂತ ಅನೇಕ ಕೆಲಸಗಳು ಮುಂದೆ ಬರಲಿಕ್ಕೆ ಇದೆ ಎಂದು ಕೂಡ ಅವರು ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಾ ಹೇಳಿದ್ದಾರೆ.
ಈವರೆಗೆ ನಾನು ಏನು ಮಾಡಿರುವೆ ಎಂಬುದು ಮುಖ್ಯ ಅಲ್ಲ. ಈವರೆಗೆ ಏನು ನಡೆದಿದೆಯೋ ಅವೆಲ್ಲ ಟ್ರೈಲರ್ ಮಾತ್ರ. ಪ್ರಮುಖ ವಿಷಯಗಳು ಇನ್ನು ಮುಂದೆ ಬರಲಿಕ್ಕಿದೆ. ಸಾಕಷ್ಟು ವಿಷಯಗಳು ಪೂರ್ತಿ ಮಾಡಬೇಕಿದೆ. ಒಂದಷ್ಟು ಕನಸುಗಳು ಬಾಕಿ ಇವೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth