ಊಟ ಕೊಡಲು ಹೋಗಿದ್ದ ಡೆಲಿವರಿ ಬಾಯ್ ಗಳು ಕೆಲವೇ ಕ್ಷಣದಲ್ಲಿ ಪ್ರಾಣವನ್ನೇ ಕಳೆದುಕೊಂಡರು!
24/02/2021
ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್ ಗಳು ಊಟ ಡೆಲಿವರಿ ಕೊಡಲು ಹೋಗಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಗರದ ಜಾಲಹಳ್ಳಿ ವಿಲೇಜ್ ರಸ್ತೆಯಲ್ಲಿ ನಡೆದಿದೆ.
ಡೆಲಿವರಿ ಬಳಿಕ ಬೈಕ್ ಮೇಲೆ ಕುಳಿತಿದ್ದ ಯುವಕರು ಅಲ್ಲಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಕಾರೊಂದು ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಇಬ್ಬರು ಯುವಕರು ಕೂಡ ಬೈಕ್ ನಿಂದ ಎಸೆಯಲ್ಪಟ್ಟಿದ್ದಾರೆ.
ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತ ನಡೆದರೂ ಕಾರು ಚಾಲಕ ನಿಲ್ಲದೇ ಪರಾರಿಯಾಗಿದ್ದಾನೆ. ಅಪಘಾತದ ಭೀಕರ ಶಬ್ಧಕ್ಕೆ ಸ್ಥಳೀಯರು ಓಡಿ ಬಂದಿದ್ದು, ವೇಳೆಗಾಗಲೇ ಕಾರು ಸ್ಥಳದಿಂದ ಪರಾರಿಯಾಗಿದೆ.