ಅಖಿಲ ಭಾರತ ಹಿಂದೂ ಮಹಾಸಭಾದಿಂದ ಧಾರವಾಡ ಲೋಕಸಭಾ ಅಖಾಡಕ್ಕೆ ಧುಮುಕಿದ . ಎಸ್.ಎಸ್.ಪಾಟೀಲ್
ಧಾರವಾಡ: ಧಾರವಾಡ ಲೋಕಸಭಾ ಚುನಾವಣಾ ಅಖಾಡಕ್ಕೆ ವಿಶ್ವದರ್ಶನ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಡಾ. ಎಸ್.ಎಸ್. ಪಾಟೀಲರು ಧುಮುಕಲಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಿಂದ ಅವರು ಸ್ಪರ್ಧಿಸಲಿದ್ದಾರೆ. ಡಾ. ಎಸ್.ಎಸ್. ಪಾಟೀಲ ಅವರನ್ನು ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಾಜ್ಯಾಧ್ಯಕ್ಷ ಡಾ.ಮನೋಜ್ ಆಲೂಂಗಲ್ ಘೋಷಿಸಿದರು.
ಡಾ.ಎಸ್.ಎಸ್. ಪಾಟೀಲ ಅವರು ಪತ್ರಿಕಾ ರಂಗದ ಮೂಲಕವೇ ಜನಮನ್ನಣೆ ಪಡೆದವರು. ಬಡವರ, ನಿರ್ಗತಿಕರ, ನೊಂದವರ ಅಸಹಾಯಕರ, ಶೋಷಿತರ ಕುರಿತು ಕಾಳಜಿ ಇರುವ ಇವರು, ಭ್ರಷ್ಟಾಚಾರವನ್ನು ಹೋಗಲಾಡಿಸುವ ಸದುದ್ದೇಶದಿಂದ ಹಾಗೂ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ನಮ್ಮ ಸಾರ್ವಜನಿಕರಿಗೆ ದೊರೆಯದೇ ಇರುವುದರಿಂದ ರಾಜಕೀಯಕ್ಕೆ ಧುಮುಕುತ್ತಿರುವುದಾಗಿ ತಿಳಿಸಿದ್ದಾರೆ.
ಹಣಬಲ, ತೋಳ್ಬಲ ಇಲ್ಲದಿದ್ದರೂ ದೈವ ಬಲ ನಂಬಿರುವ ಮತ್ತು ಮುಖ್ಯವಾಗಿ ಪ್ರಜ್ಞಾವಂತ ನಾಗರೀಕರು ಮತ್ತು ವಿದ್ಯಾವಂತ ಯುವಕರ ಮೇಲೆ ಭರವಸೆ ಹೊಂದಿದ್ದಾರೆ. ಮುಖ್ಯವಾಗಿ ಅನೇಕ ಬಗೆಯ ಸಂಘ ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಸಹ ಇವರಿಗೆ ಪರಿಚಯ ಇರುತ್ತದೆ ಇವರೆಲ್ಲರೂ ಸೇರಿ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಯೋಚಿಸಿ, ಆಲೋಚಿಸಿ ಖಂಡಿತವಾಗಿಯೂ ಅಖಿಲ ಭಾರತ ಹಿಂದೂ ಮಹಾಸಭಾ ಪಾರ್ಟಿಗೆ ಬೆಂಬಲಿಸಿ ನನಗೆ ಮತ ಹಾಕೇ ಹಾಕುತ್ತಾರೆ ಎಂದು ಎಸ್ ಎಸ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತನಗೆ ಸಾಕಷ್ಟು ಮಠಾಧೀಶರು, ಶಾಸ್ತ್ರಿಗಳು, ಅರ್ಚಕರು, ಪುರೋಹಿತರು, ವಿದ್ವಾನ್ ಪಂಡಿತರು, ಆಚಾರ್ಯರು ಇವರೆಲ್ಲರ ಅನುಗ್ರಹವಿದೆ. ಮತದಾನ ಪ್ರಭುಗಳೇ ನನ್ನ ಗೆಲುವಿನ ಸಂಪತ್ತು ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth