ಪ್ರಧಾನಿ ಮೋದಿಯ ಹಣೆ ಬರಹ ಟ್ರಂಪ್ ಗಿಂತಲೂ ಕೆಟ್ಟದಾಗಿರಲಿದೆ | ಹೀಗೆ ಹೇಳಿಕೆ ನೀಡಿದವರು ಯಾರು ಗೊತ್ತಾ? - Mahanayaka

ಪ್ರಧಾನಿ ಮೋದಿಯ ಹಣೆ ಬರಹ ಟ್ರಂಪ್ ಗಿಂತಲೂ ಕೆಟ್ಟದಾಗಿರಲಿದೆ | ಹೀಗೆ ಹೇಳಿಕೆ ನೀಡಿದವರು ಯಾರು ಗೊತ್ತಾ?

24/02/2021

ಕೋಲ್ಕತ್ತಾ:  ಪ್ರಧಾನಿ ನರೇಂದ್ರ ಮೋದಿ ಅವರ ಹಣೆಬರಹ ಟ್ರಂಪ್ ಗಿಂತಲೂ ಕೆಟ್ಟದಾಗಿರಲಿದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದು,  ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಹೂಗ್ಲಿಯಲ್ಲಿ ಇಂದು ಆಯೋಜಿಸಿರುವ ಪಕ್ಷದ ಸಮಾವೇಶದಲ್ಲಿ ಮಾತನಾಡುತ್ತಾ ಸಿಎಂ ಮಮತಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ಆಕ್ರೋಶ ಹೊರ ಹಾಕಿದ್ದು, ಭವಿಷ್ಯದಲ್ಲಿ  ಪ್ರಧಾನಿ ಮೋದಿ ಅವರ ಹಣೆ ಬರಹ ಟ್ರಂಪ್ ಗಿಂತಲೂ ಕೆಟ್ಟದಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ದಗಾಕೋರ, ರಾಕ್ಷಸ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು,  ಪ್ರಧಾನ ಮಂತ್ರಿಯೊಬ್ಬ ಈ ದೇಶದ ದೊಡ್ಡ ದಂಗೆಕೋರ ಎಂದು ಹೇಳಿದ ಅವರು, ವಿಧಾನ ಸಭಾ ಚುನಾವಣೆಯಲ್ಲಿ ನಾನು ಗೋಲ್ ಕೀಪರ್ ಆಗಿ ಕೆಲಸ ಮಾಡುತ್ತೇನೆ. ಬಿಜೆಪಿಗೆ ಒಂದೇ ಒಂದು ಗೋಲ್ ಹೊಡೆಯಲು ಬಿಡುವುದಿಲ್ಲ ಎಂದು ಸವಾಲು ಹಾಕಿದರು.

mamatha

ಇತ್ತೀಚಿನ ಸುದ್ದಿ