ಕ್ರೀಡೆಯೊಂದಿಗೆ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿ ಡಿ.ಬಿ.ಶಬರಿ

ಕೊಟ್ಟಿಗೆಹಾರ: ಕ್ರೀಡೆಯಲ್ಲಿ ಸಾಧನೆ ಮಾಡಿ ಓದಿನಲ್ಲೂ ಸಾಧನೆ ಮಾಡುವ ವಿದ್ಯಾರ್ಥಿಗಳು ಬಹಳ ವಿರಳ.ಅದರಲ್ಲೂ ಕ್ರೀಡೆಯ ಬೆನ್ನೇರಿ ಸಾಧನೆ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ವಾಣಿಜ್ಯ ವಿಭಾಗದಲ್ಲಿ ಶೇ90.83 ಅಂಕ ಪಡೆದಿರುವ ದುರ್ಗದಹಳ್ಳಿಯ ಡಿ.ಬಿ.ಶಬರಿ ಕ್ರೀಡೆಯಲ್ಲೂ ಸೈ ಓದಿನಲ್ಲಿಯೂ ಸೈ ಎಂಬಂತೆ ಉತ್ತಮ ಅಂಕ ಪಡೆದು ಮಲೆನಾಡಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿ ಡಿ.ಬಿ.ಶಬರಿ ಕಾಫಿನಾಡಿನ ಕ್ರೀಡಾಪಟು. 4*100 ರಿಲೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿರುವ ಪ್ರತಿಭಾವಂತೆ. ಇವರು ಬಾಳೂರು ಹೋಬಳಿ ದುರ್ಗದಹಳ್ಳಿಯ ಕೃಷಿಕರಾದ ಡಿ.ಪಿ.ಬಾಲಕೃಷ್ಣ ಹಾಗೂ ಎಂ.ಎಸ್.ಅಶ್ವಿನಿ ಅವರ ಪುತ್ರಿಯಾಗಿದ್ದಾರೆ.
ಇವರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಹರ್ಡಲ್ಸ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರ ಕ್ರೀಡೆ ಹಾಗೂ ಶೈಕ್ಷಣಿಕ ಸಾಧನೆಗೆ ಪೋಷಕರು,ಗ್ರಾಮಸ್ಥರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
‘ಪಿಯುಸಿ ನಂತರ ಬಿಬಿಎ,ಎಂಬಿಎ ವ್ಯಾಸಂಗ ಮಾಡಿ ಉತ್ತಮ ಕ್ರೀಡಾಪಟು ಆಗಿ ಸರ್ಕಾರಿ ಅಧಿಕಾರಿಯಾಗಬೇಕು’ ಎಂಬುದು ನನ್ನ ಮಹದಾಸೆ ಎಂದು ವಿದ್ಯಾರ್ಥಿನಿ ಡಿ.ಬಿ.ಶಬರಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth