ಆಶ್ರಮದ ನೀರಿನ ತೊಟ್ಟಿಯಲ್ಲಿ ತಾಯಿ—ಮಗಳ ಮೃತದೇಹ ಪತ್ತೆ!

ಚಿತ್ರದುರ್ಗ: ಆಶ್ರಮದ ನೀರಿನ ತೊಟ್ಟಿಯಲ್ಲಿ ತಾಯಿ ಮತ್ತು ಮಗಳ ಮೃತದೇಹ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿನ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ನಡೆದಿದೆ.
ಈ ಆಶ್ರಮದ ಪೂಜಾರಿಯಾಗಿರುವ ಸುರೇಶ್ ಪತ್ನಿ ಗೀತಾ (42) ಹಾಗೂ ಪುತ್ರಿ ಪ್ರಿಯಾಂಕಾ (20) ಅವರ ಮೃತದೇಹಗಳು ಆಶ್ರಮದಲ್ಲಿರುವ ನೀರಿನ ತೊಟ್ಟಿಯಲ್ಲಿ ಮಂಗಳವಾರ ರಾತ್ರಿ ಪತ್ತೆಯಾಗಿವೆ.
ಘಟನೆಯು ಅಸಹಜ ಸಾವಿನಂತೆ ಕಂಡು ಬಂದರೂ, ಸಾವಿಗೆ ನಿಖರ ಕಾರಣಗಳೇನು ಎನ್ನುವುದು ತಿಳಿದು ಬಂದಿಲ್ಲ. ತಾಯಿ ಗೀತ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿತ್ತು. ಆದರೆ ಆಶ್ರಮದ ಗೋಡೆಯ ಮೇಲೆ ತಾಯಿ—ಮಗಳ ಹೆಸರಿನಲ್ಲಿ ಬರೆದಿಟ್ಟಿರುವ ಡೆತ್ ನೋಟ್ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನೆ ಸಂಬಂಧ ಮೃತ ಗೀತಾಳ ಸಹೋದರ ಠಾಣೆಗೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಡೆತ್ ನೋಟ್ ಪರಿಶೀಲಿಸಿದ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth