ಲೋಕಸಭಾ ಚುನಾವಣೆ: ವೋಟ್ ಮಾಡಲು ಅನುಕೂಲ ಆಗುವಂತೆ ನಮಾಝಿನ ಸಮಯವನ್ನು ಬದಲಾಯಿಸಲು ಸಮಸ್ತ ಸೂಚನೆ - Mahanayaka
10:31 AM Thursday 17 - October 2024

ಲೋಕಸಭಾ ಚುನಾವಣೆ: ವೋಟ್ ಮಾಡಲು ಅನುಕೂಲ ಆಗುವಂತೆ ನಮಾಝಿನ ಸಮಯವನ್ನು ಬದಲಾಯಿಸಲು ಸಮಸ್ತ ಸೂಚನೆ

19/04/2024

ಮುಂದಿನ ಶುಕ್ರವಾರ ಲೋಕಸಭಾ ಚುನಾವಣೆ ನಡೆಯುವಾಗ ಶುಕ್ರವಾರದ ಜುಮಾ ನಮಾಝ್ ಗಾಗಿ ಯಾರೂ ಮತದಾನದಿಂದ ದೂರ ಉಳಿಯದಂತೆ ಕೇರಳದ ಸಮಸ್ತ ಸಂಘಟನೆ ಪ್ರಯತ್ನ ನಡೆಸುತ್ತಿದೆ. ಮತದಾನ ಕೇಂದ್ರದಲ್ಲಿರುವ ಅಧಿಕಾರಿಗಳು, ಮತದಾರರಿಗೆ ಅನುಕೂಲ ಆಗುವ ರೀತಿಯಲ್ಲಿ ನಮಾಝಿನ ಸಮಯವನ್ನು ಬದಲಾಯಿಸಲು ಮಸೀದಿ ಕಮಿಟಿಗಳಿಗೆ ತಿಳಿಸಲಾಗಿದೆ.

ಯಾರೂ ಮತದಾನದಿಂದ ಗೈರಾಗದಂತೆ ನೋಡಿಕೊಳ್ಳಲು ಸಮಸ್ತ ಶ್ರಮಿಸುತ್ತಿದ್ದು, ಮತದಾನ ಕೇಂದ್ರದಲ್ಲಿರುವ ಅಧಿಕಾರಿಗಳು, ಮತದಾರರಿಗೆ ಅನುಕೂಲ ಆಗುವ ರೀತಿಯಲ್ಲಿ ನಮಾಝಿನ ಸಮಯವನ್ನು ಬದಲಾಯಿಸಲು ಮಸೀದಿ ಕಮಿಟಿಗಳಿಗೆ ತಿಳಿಸಲಾಗಿದೆ.

ಚುನಾವಣೆ ದಿನದಂದು ಪ್ರಾರ್ಥನೆ ಸಮಯವನ್ನು ಒಂದು ಗಂಟೆ ಮುಂದೂಡಬೇಕೆಂದು ಸಮಸ್ತ ಸಲಹೆ ನೀಡಿದೆ. ಸಮಸ್ತದ ಅಧೀನದಲ್ಲಿರುವ ಮಸೀದಿಗಳಲ್ಲಿ ನಮಾಝ್ ಗೆ ಕರೆ (ಆಝಾನ್) ನೀಡಿದಾಕ್ಷಣ ಪ್ರಾರ್ಥನೆ ಆರಂಭಗೊಳ್ಳಬೇಕು. ಚುನಾವಣಾ ಕರ್ತವ್ಯದಲ್ಲಿದಲ್ಲಿರುವವರನ್ನೂ ಗಮನದಲ್ಲಿರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಸ್ತ ತಿಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ