ಅಂದಿನ ಬೇಬಿ ಶಾಮಿಲಿ ಈಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ?: ಅವರ ವಯಸ್ಸೆಷ್ಟು ಗೊತ್ತಾ?
ಬಾಲ ನಟಿಯಾಗಿ ಸಾಕಷ್ಟು ಹೆಸರು ವಾಸಿಯಾಗಿದ್ದ ಬೇಬಿ ಶಾಮಿಲಿ ಅವರು ಈಗ ಎಲ್ಲಿದ್ದಾರೆ? ಇನ್ನೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆಯೇ? ಅಥವಾ ಬೇರೆ ಕ್ಷೇತ್ರದಲ್ಲಿದ್ದಾರೆಯೇ ಎನ್ನುವ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಕೇರಳದ ತಿರುವಲ್ಲಿ ಮೂಲದ ಶಾಮಿಲಿ, ಕೇವಲ ಎರಡು ವರ್ಷದವರಿದ್ದಾಗ ಸಿನಿಮಾ ಲೋಕಕ್ಕೆ ಆಗಮಿಸಿದ್ದರು. ಅಂದಿನ ಕಾಲದಲ್ಲಿ ಬಾಲ ಕಲಾವಿದರಿಗೆ ಅತೀವ ಬೇಡಿಕೆಯಿತ್ತು. ಆದರೆ, ಆ ಸಂದರ್ಭದಲ್ಲಿ ಬಾಲ ಕಲಾವಿದ ಕೊರತೆ ಸಾಕಷ್ಟಿತ್ತು. ಅಂಥ ಸಂದರ್ಭದಲ್ಲಿ ತಿಳಿವಳಿಕೆ ಇಲ್ಲದ ಹೊತ್ತಲ್ಲೇ 1989ರಲ್ಲಿ ತಮಿಳಿನ ರಾಜಾನದಾಯ್ ಚಿತ್ರದ ಮೂಲಕ ಬೇಬಿ ಶಾಮಿಲಿ ನಟನೆ ಆರಂಭಿಸಿದರು. ವಿಜಯ್ ಕಾಂತ್ ಈ ಚಿತ್ರದ ನಾಯಕರಾಗಿದ್ದರು.
ಅದಾದ ಮೇಲೆ ತಮಿಳಿನಲ್ಲಿ ಅಂಜಲಿ ಸಿನಿಮಾ ಮೂಲಕ ಎಂಟ್ರಿಕೊಟ್ಟು ಅಲ್ಲಿಯೂ ಗಮನ ಸೆಳೆದರು. ಕೇವಲ 3 ವರ್ಷದವಳಿದ್ದಾಗ ಮಲಯಾಳಂನಲ್ಲಿ ಮಾಲೂಟಿ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಮತ್ತೆ ಹಾಡಿತು ಕೋಗಿಲೆ ಚಿತ್ರದ ಮೂಲಕ 1990ರಲ್ಲಿ ಕನ್ನಡಕ್ಕೂ ಆಗಮಿಸಿದರು. ಅದಾದ ಮೇಲೆ ಸೌತ್ ನ ಬಹುತೇಕ ಎಲ್ಲ ಸಿನಿಮಾಗಳಲ್ಲೂ ಬಾಲನಟಿಯಾಗಿ ಶಾಮಿಲಿ ನಟಿಸಿದ್ದರು.
ಬೇಬಿ ಶಾಮಿಲಿ ನಟಿಸಿದ ಕನ್ನಡ ಚಿತ್ರಗಳು:
ಕನ್ನಡದಲ್ಲಿ ಭೈರವಿ, ಶ್ವೇತಾಗ್ನಿ, ಪೊಲೀಸ್ ಲಾಕ್ ಅಪ್, ಕಾದಂಬರಿ, ಶಾಂಭವಿ, ದಾಕ್ಷಾಯಿಣಿ, ಹೂವು ಹಣ್ಣು, ಮಕ್ಕಳ ಸಾಕ್ಷಿ, ಚಿನ್ನ ನೀ ನಗುತಿರು, ಭುವನೇಶ್ವರಿ, ಕರುಳಿನ ಕುಡಿ, ಜಗದೀಶ್ವರಿ ಸೇರಿ ಹಲವು ಸಿನಿಮಾಗಳಲ್ಲಿ ಬೇಬಿಶಾಮಿಲಿ ನಟಿಸಿದ್ದರು.
ನಾಯಕಿಯಾಗಿ ನಟಿಸಿದ್ದರು ಶಾಮಿಲಿ:
2009ರಲ್ಲಿ ತಮಿಳಿನಲ್ಲಿ ಓಯ್ ಚಿತ್ರದಲ್ಲಿ ಸಿದ್ಧಾರ್ಥ್‌ಗೆ ನಾಯಕಿಯಾಗಿ ಶಾಮಿಲಿ ನಟಿಸಿದರು. ಗ್ಯಾಪ್ ನ ಬಳಿಕ 2016ರಲ್ಲಿ ಮಲಯಾಳಂನಲ್ಲಿ ವಲ್ಲೇಮ್ ತೆಟ್ಟಿ ಪುಲ್ಲೇಮ್ ತೆಟ್ಟಿ ಮತ್ತು ತಮಿಳಿನ ವೀರ ಸಿವಾಜಿ ಚಿತ್ರದಲ್ಲಿ ನಟಿಸಿದರು. 2018ರಲ್ಲಿ ತೆಲುಗಿನ ಅಮ್ಮಮ್ಮಗಾರಿಲೋ ಸಿನಿಮಾ ಬಳಿಕ ಮತ್ಯಾವ ಚಿತ್ರಗಳಲ್ಲೂ ನಟಿಸಿಲ್ಲ. ನಾಯಕಿಯಾಗಿ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಂಥ ಹಿಟ್ ಆಗಲಿಲ್ಲ. ಆ ಕಾರಣಕ್ಕೂ ನಟನೆಯಿಂದ ಶಾಮಿಲಿ ದೂರವೇ ಉಳಿದಿದ್ದಾರೆ ಎನ್ನಲಾಗಿದೆ.
ಚೈನ್ನೈನಲ್ಲಿರುವ ಶಾಮಿಲಿ:
ಬೇಬಿ ಶಾಮಿಲಿಗೆ ಸದ್ಯ 36 ವರ್ಷ ವಯಸ್ಸಾಗಿದೆ. ಅವರು ಚೈನ್ನೈನಲ್ಲಿಯೇ ಸದ್ಯ ವಾಸ ಮಾಡ್ತಾಇದ್ದಾರೆ. ಶಾಮಿಲಿಗೆ ಪೈಂಟಿಂಗ್ ಎಂದರೆ ತುಂಬಾ ಇಷ್ಟ. ಇವರು ಅತ್ಯುತ್ತಮ ಚಿತ್ರ ಕಲಾವಿದೆಯೂ ಹೌದು. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಾವು ಬರೆದ ಕಲಾಕೃತಿಗಳನ್ನು ಪ್ರಕಟಿಸುತ್ತಿರುತ್ತಾರೆ. ಅಂದ ಹಾಗೆ ಶಾಮಿಲಿ ಅವರ ಅಕ್ಕ ಶಾಲಿನಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ತಲಾ ಎಂದೇ ಕರೆಯಲ್ಪಡುವ ಕಾಲಿವುಡ್ ನ ಸ್ಟಾರ್ ನಟ ಅಜಿತ್ ಇವರ ಅಕ್ಕನ ಗಂಡ ಆಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth