ದಟ್ಟ ಮಂಜು ಆವರಿಸಿದ್ದರಿಂದ ಏನೂ ಕಾಣುತ್ತಿರಲಿಲ್ಲ: ಟ್ಯಾಂಕರ್ ಗಳೆರಡರ ನಡುವೆ ನಡೆಯಿತು ಭೀಕರ ಅಪಘಾತ
27/02/2021
ಕಡಬ: ಟ್ಯಾಂಕರ್ ಗಳೆರಡು ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದ್ದು, ಪರಿಣಾಮ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಘಟನೆ ಇಲ್ಲಿನ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಎದುರು ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಕೋಲಾರದಿಂದ ಮಂಗಳೂರಿಗೆ ಹೋಗುತ್ತಿದ್ದು, ಈ ವೇಳೆ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ಟ್ಯಾಂಕರ್ ನ ಚಾಲಕರಿಗೂ ಗಾಯವಾಗಿದೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ.
ಮುಂಜಾನೆಯ ವೇಳೆ ದಟ್ಟ ಮಂಜು ಆವರಿಸಿದ್ದು, ಇದರಿಂದಾಗಿ ಒಂದು ವಾಹನಕ್ಕೆ ಇನ್ನೊಂದು ವಾಹನ ಕಾಣದೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ನೆಲ್ಯಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.