ಬಾಯ್ಲರ್ ರಿಪೇರಿ ಮಾಡುತ್ತಿದ್ದ ವೇಳೆ ಏಕಾಏಕಿ ಹೊರ ಬಂದ ಭಾರೀ ಶಾಖ: ಕಾರ್ಮಿಕನ ದಾರುಣ ಸಾವು
ಚಿಕ್ಕಮಗಳೂರು: ಬಾಯ್ಲರ್ ರಿಪೇರಿ ಮಾಡುವಾಗ ಹೊರ ಬಂದ ಭಾರೀ ಪ್ರಮಾಣದ ಶಾಖ ತಗುಲಿ ರಿಪೇರಿ ಮಾಡುತ್ತಿದ್ದ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ವಿದ್ಯಾ ಕಾಫಿ ಕ್ಯೂರಿಂಗ್ ನಲ್ಲಿ ನಡೆದಿದೆ.
ಮಡಿಕೇರಿಯ ಕುಶಾಲನಗರ ಮೂಲದ ಕಾರ್ಮಿಕ ಉದಯ್ (27) ಮೃತಪಟ್ಟ ಕಾರ್ಮಿಕನಾಗಿದ್ದಾನೆ. ಬಾಯ್ಲರ್ ಸರಿಪಡಿಸುವಾಗ ಏಕಾಏಕಿ 340 ಡಿಗ್ರಿ ಶಾಖ ಹೊರ ಬಂದಿದ್ದು, ಈ ವೇಳೆ ಬಾಯ್ಲರ್ ಶಾಖಕ್ಕೆ ತಗುಲಿ ಕಾರ್ಮಿಕ ಸುಟ್ಟು ಕರಕಲಾಗಿದ್ದಾರೆ.
ಚಿಕ್ಕಮಗಳೂರು ನಗರದ ಕುರುಬರಹಳ್ಳಿ ಬಳಿ ಇರುವ ವಿದ್ಯಾ ಕಾಫಿ ಕ್ಯೂರಿಂಗ್ ನಲ್ಲಿ ಈ ದುರ್ಘಟನೆ ನಡೆದಿದೆ. ಮಗನನ್ನು ಕಳೆದುಕೊಂಡಿರುವ ತಾಯಿ ಶವಗಾರದ ಮುಂಭಾಗದಲ್ಲಿ ಕಣ್ಣೀರು ಹಾಕುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ.
ಕಾರ್ಮಿಕನ ಸಾವಿನ ಹಿನ್ನೆಲೆ ಕಾಫಿ ಕ್ಯೂರಿಂಗ್ ಕಾರ್ಮಿಕರು ಶವಗಾರದ ಬಳಿ ಜಮಾಯಿಸಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: