ರೈತರಿಗೆ ಸಿಹಿ ಸುದ್ದಿ: ರೈತ ಸಿರಿ ಯೋಜನೆಯಲ್ಲಿ ಸಿಗಲಿದೆ 10 ಸಾವಿರ ರೂಪಾಯಿಗಳು
![raitha siri](https://www.mahanayaka.in/wp-content/uploads/2024/06/raitha-siri.jpg)
ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೈತರಿಗಾಗಿ ರೈತ ಸಿರಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸರ್ಕಾರವು ರೈತರಿಗೆ 10 ಸಾವಿರ ರೂಪಾಯಿ ಸಹಾಯ ಧನವನ್ನು ನೀಡುತ್ತಿದೆ.
ಸಣ್ಣ ರೈತರಿಗೆ 10 ಸಾವಿರ ರೂಪಾಯಿ ಸಹಾಯ ಧನವನ್ನು ನೀಡಿ ಅವರನ್ನು ಕೃಷಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಅರ್ಹತೆಗಳೇನು?
* ಸಿರಿ ಧಾನ್ಯಗಳನ್ನು ಬೆಳೆಯುವ ರೈತರು ಈ ಯೋಜನೆಗೆ ಅರ್ಜಿ ಹಾಕಬಹುದು.
* ರಾಗಿ ಬೆಳೆಯನ್ನು ಬೆಳೆಯುವ ರೈತರಿಗೆ ಈ ಯೋಜನೆಯ ಮೊದಲ ಆದ್ಯತೆ ನೀಡಲಾಗಿದೆ.
* ಒಂದು ಹೆಕ್ಟೇರ್ ಕೃಷಿ ಭೂಮಿಯನ್ನು ನೀವು ಹೊಂದಿರಬೇಕು
* ರೈತರ ಭೂಮಿ ಅವರ ಹೆಸರಿನಲ್ಲಿ ಇರಬೇಕು
* ಇದೆ ರೀತಿಯ ಬೇರೆ ಯಾವುದೇ ಸರ್ಕಾರಿ ಯೋಜನೆಯ ಮೂಲಕ ಸಹಾಯ ಧನ ಪಡೆದಿರಬಾರದು.
ಬೇಕಾಗುವ ದಾಖಲೆಗಳು:
* ಮೊಬೈಲ್ ನಂಬರ್,
* ಆಧಾರ್ ಕಾರ್ಡ್ (ಜಮೀನು ಹೆಸರಿನಲ್ಲಿರುವವರದು)
* ಬ್ಯಾಂಕ್ ಖಾತೆ
* ವಿಳಾಸ ಪ್ರಮಾಣ ಪತ್ರ
* ಪಡಿತರ ಚೀಟಿ
* ಜಮೀನಿನ ದಾಖಲೆಗಳು
ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು https://raitamitra.karnataka.gov.in/ ವೆಬ್ ಸೈಟ್ ಗೆ ಭೇಟಿ ನೀಡಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: