ಮೋದಿ ಬಳಗಕ್ಕೆ ಸೇರ್ತಾರ ಉದ್ಧವ್ ಠಾಕ್ರೆ..? ರಾಣಾ 'ಭವಿಷ್ಯದ' ಹಿಂದಿನ ಮರ್ಮವೇನು..? - Mahanayaka

ಮೋದಿ ಬಳಗಕ್ಕೆ ಸೇರ್ತಾರ ಉದ್ಧವ್ ಠಾಕ್ರೆ..? ರಾಣಾ ‘ಭವಿಷ್ಯದ’ ಹಿಂದಿನ ಮರ್ಮವೇನು..?

03/06/2024

ಲೋಕಸಭಾ ಚುನಾವಣೆ ಹೊರಬಿದ್ದ 15 ದಿನಗಳಲ್ಲಿ ಶಿವಸೇನೆ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಮೋದಿ ಸರ್ಕಾರವನ್ನು ಸೇರಿಕೊಳ್ಳಲಿದ್ದಾರೆ ಎಂದು ಅಮರಾವತಿ ಶಾಸಕ ರವಿ ರಾಣಾ ಭವಿಷ್ಯ ನುಡಿದಿದ್ದಾರೆ.


Provided by

“ಮೋದೀ ಜಿ ಮತ್ತೆ ಪ್ರಧಾನಿಯಾದ 15 ದಿನಗಳಲ್ಲಿ ಉದ್ಧವ್ ಠಾಕ್ರೆ ಅವರು ಮೋದಿ ಸರ್ಕಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಯಾಕೆಂದರೆ ಮುಂಬರುವ ಯುಗ ಮೋದಿಜಿಯ ಯುಗವಾಗಿದೆ ಮತ್ತು ಉದ್ಧವ್ ಅದನ್ನು ತಿಳಿದಿದ್ದಾರೆ” ಎಂದು ರಾಣಾ ಹೇಳಿದರು.

ಶಿವ ಸೇನೆ ಉದ್ಧವ್ ಬಣ, ಕಾಂಗ್ರೆಸ್ ಮತ್ತು ಶರದ್ ಪವಾರ್ ರ ಎನ್‌ಸಿಪಿ ತಮ್ಮ ಬಳಿ ರಕ್ತದೊತ್ತಡ ಔಷಧಿಗಳನ್ನು ಹಾಗೂ ವೈದ್ಯರನ್ನು ಹೊಂದಿರಬೇಕು. ಯಾಕೆಂದರೆ ಅವರಲ್ಲಿ ಹಲವರು ಜೂನ್ 5ರಂದು ಅಸೌಖ್ಯಕ್ಕೊಳಗಾಗಲಿದ್ದಾರೆ ಎಂದೂ ರಾಣಾ ವ್ಯಂಗ್ಯವಾಡಿದ್ದಾರೆ.


Provided by

 

ರವಿ ರಾಣಾರ ಪತ್ನಿ ನವನೀತ್ ರಾಣಾ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ