ಚುನಾವಣಾ ಆಯುಕ್ತರು ನಾಪತ್ತೆಯಾಗಿಲ್ವಂತೆ: ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಗರಂ ಆಗಿದ್ಯಾಕೆ.? - Mahanayaka

ಚುನಾವಣಾ ಆಯುಕ್ತರು ನಾಪತ್ತೆಯಾಗಿಲ್ವಂತೆ: ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಗರಂ ಆಗಿದ್ಯಾಕೆ.?

03/06/2024

ಚುನಾವಣಾ ಆಯುಕ್ತರು ಯಾವತ್ತೂ ನಾಪತ್ತೆಯಾಗಿಲ್ಲ. ಸದಾ ಇಲ್ಲಿದ್ದರು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಇಂದು ಹೇಳಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ಟ್ರೋಲ್ ಗಳಲ್ಲಿ ನಮ್ಮನ್ನು ಲಾಪತಾ ಜಂಟಲ್‌ಮೆನ್‌ ಎಂದು ಹೇಳಲಾಗುತ್ತಿದೆ ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.


Provided by

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರ ಸಹಿತ 64.2 ಕೋಟಿ ಮತದಾರರು ಮತ ಚಲಾಯಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ ಎಂದು ಅವರು ಹೇಳಿದರು.

ಈ ಜಗತ್ತಿನ ಅತ್ಯಂತ ದೊಡ್ಡ ಚುನಾವಣಾ ಪ್ರಕ್ರಿಯೆಯಲ್ಲಿ 68000 ಮೇಲ್ವಿಚಾರಣಾ ತಂಡಗಳು ಹಾಗೂ 1.5 ಕೋಟಿ ಸಿಬ್ಬಂದಿ ಕೆಲಸ ಮಾಡಿದ್ದಾರೆ.
2019ರಲ್ಲಿ ನಡೆದ ಕಳೆದ ಲೋಕಸಭಾ ಚುನಾವಣೆಯಲ್ಲಿ 540 ಮರುಮತದಾನಗಳು ಬೂತ್‌ ಮಟ್ಟದಲ್ಲಿ ನಡೆದಿದ್ದರೆ ಈ ಬಾರಿ 39 ಕಡೆ ಮರುಮತದಾನ ನಡೆದಿವೆ ಎಂದು ಹೇಳಿದರು.


Provided by

ದಶಕಗಳಲ್ಲಿ ಮೊದಲನೇ ಬಾರಿ ಜಮ್ಮು ಕಾಶ್ಮೀರದಲ್ಲಿ ದಾಖಲೆ 58.58% ಮತದಾನವಾಗಿದೆ ಎಂದು ಅವರು ಹೇಳಿದರು.
ಈ ಬಾರಿ ಆಯೋಗವು ನಗದು, ಫ್ರೀಬೀ, ಮದ್ಯ, ಡ್ರಗ್ಸ್‌ ಸೇರಿದಂತೆ ರೂ 10,000 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. 2014 ಚುನಾವಣೆ ವೇಳೆ ಈ ಮೊತ್ತ ರೂ 3500 ಕೋಟಿ ಆಗಿತ್ತು ಎಂದು ಅವರು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ