ಎಕ್ಸಿಟ್ ಪೋಲ್ ನಲ್ಲಿ ಬದಲಾವಣೆ: ಪುನಃ ಎಕ್ಸಿಟ್ ಪೋಲ್ ಪ್ರಸಾರ ಮಾಡಿ ಅಚ್ಚರಿ ಹುಟ್ಟಿಸಿದ ಝೀ ನ್ಯೂಸ್ - Mahanayaka

ಎಕ್ಸಿಟ್ ಪೋಲ್ ನಲ್ಲಿ ಬದಲಾವಣೆ: ಪುನಃ ಎಕ್ಸಿಟ್ ಪೋಲ್ ಪ್ರಸಾರ ಮಾಡಿ ಅಚ್ಚರಿ ಹುಟ್ಟಿಸಿದ ಝೀ ನ್ಯೂಸ್

03/06/2024

ಜೂನ್ ಒಂದರಂದು ಬಿಡುಗಡೆಗೊಳಿಸಿದ ಎಕ್ಸಿಟ್ ಪೋಲ್ ನಲ್ಲಿ ಬದಲಾವಣೆಯನ್ನು ಮಾಡಿ ಪುನಃ ಎಕ್ಸಿಟ್ ಪೋಲ್ ಪ್ರಸಾರ ಮಾಡಿ ಝೀ ನ್ಯೂಸ್ ಅಚ್ಚರಿ ಹುಟ್ಟಿಸಿದೆ. ಜೂನ್ ಒಂದರಂದು ಬಿಡುಗಡೆಗೊಂಡ ಎಕ್ಸಿಟ್ ಪೋಲ್ ನಲ್ಲಿ ತೋರಿಸಿದಕ್ಕಿಂತ ಎನ್‌ಡಿಎಗೆ 78 ಸ್ಥಾನಗಳು ಕಡಿಮೆಯಾಗಬಹುದೆಂದು ಇದೀಗ ಬಿಡುಗಡೆಗೊಳಿಸಲಾದ ಎಕ್ಸಿಟ್ ಪೋಲ್ ನಲ್ಲಿ ಝೀ ನ್ಯೂಸ್ ತೋರಿಸಿದೆ. ಬಿಜೆಪಿ ಬೆಂಬಲ ದೊಂದಿಗೆ ರಾಜ್ಯಸಭೆಯ ಸದಸ್ಯರಾಗಿರುವ ಸುಭಾಷ್ ಚಂದ್ರ ಅವರ ಮಾಲಕತ್ವದ ಚಾನೆಲ್ ಇದಾಗಿದೆ.


Provided by

ಈ ಮೊದಲು ಬಿಡುಗಡೆಗೊಳಿಸಿದ ಎಕ್ಸಿಟ್ ಪೋಲ್ ನಲ್ಲಿ ಎನ್ ಡಿ ಎ ಗೆ 353 ರಿಂದ 383 ಸೀಟುಗಳು ಲಭಿಸಬಹುದು ಎಂದು ಹೇಳಲಾಗಿತ್ತು. ಇದೀಗ ಎನ್ ಡಿ ಎ ಗೆ 305 ರಿಂದ 313 ಸೀಟುಗಳು ಲಭಿಸಬಹುದು ಮತ್ತು ಇಂಡಿಯಾ ಒಕ್ಕೂಟಕ್ಕೆ 180 ರಿಂದ 195 ಸೀಟುಗಳು ಲಭಿಸಬಹುದು ಎಂದು ಹೇಳಲಾಗಿದೆ. ಈ ಮೊದಲು ಇಂಡಿಯಾ ಒಕ್ಕೂಟಕ್ಕೆ 152 ರಿಂದ 182 ಸೀಟುಗಳು ಲಭಿಸಬಹುದು ಎಂದು ಹೇಳಲಾಗಿತ್ತು. ಶನಿವಾರ ಜೂನ್ ಒಂದರಂದು ಮೊದಲ ಎಕ್ಸಿಟ್ ಪೋಲ್ ಫಲಿತಾಂಶವನ್ನು ಜೀ ನ್ಯೂಸ್ ಪ್ರಸಾರ ಮಾಡಿತ್ತು. ಜೂನ್ ಎರಡರಂದು ಎರಡನೇ ಎಕ್ಸಿಟ್ ಫಲಿತಾಂಶವನ್ನು ಪ್ರಕಟಿಸಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಮಾಡಲಾದ ಸಮೀಕ್ಷೆ ಇದು ಎಂದು ಕೂಡ ಅದು ಹೇಳಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ