ಗಾಝಾದ ಜನರನ್ನು ಹಸಿವಿಗೆ ದೂಡಿ ಇಸ್ರೇಲ್ ಹತ್ಯೆಗೈಯುತ್ತಿದೆ: ಸತ್ಯ ಹೇಳಿದ ಪತ್ರಕರ್ತೆಯನ್ನು ವಜಾ ಮಾಡಿದ ಮಾಧ್ಯಮ ಸಂಸ್ಥೆ

ಗಾಝಾದ ಜನರನ್ನು ಹಸಿವಿಗೆ ದೂಡಿ ಇಸ್ರೇಲ್ ಹತ್ಯೆಗೈಯುತ್ತಿದೆ ಎಂಬ ವರದಿಯನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡ ಆಸ್ಟ್ರೇಲಿಯಾದ ಪತ್ರಕರ್ತೆಯನ್ನು ಕೆಲಸದಿಂದ ಕೈ ಬಿಡಲಾಗಿದೆ ಎಂದು ಆಸ್ಟ್ರೇಲಿಯಾ ಫೇರ್ ವರ್ಕ್ ರೆಗುಲೇಟರಿ ಬಹಿರಂಗಪಡಿಸಿದೆ. ಆಸ್ಟ್ರೇಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ನಲ್ಲಿ ಒಪ್ಪಂದದ ಅನ್ವಯ ಕೆಲಸ ಮಾಡುತ್ತಿದ್ದ ಹ್ಯಾಂಡ್ರೋನೆಟ್ ಲ್ಯಾತುಫ್ ಎಂಬ ಪತ್ರಕರ್ತೆಯನ್ನು ಕೆಲಸದಿಂದ ಕೈ ಬಿಡಲಾಗಿದೆ.
ಆದರೆ ಇಸ್ರೇಲ್ ವಿರುದ್ಧದ ವರದಿಯನ್ನು ಪೋಸ್ಟ್ ಮಾಡಿರುವುದಕ್ಕಾಗಿ ನಾವು ಅವರನ್ನು ಕೆಲಸದಿಂದ ಕೈ ಬಿಟ್ಟಿಲ್ಲ ಎಂಬ ಸಂಸ್ಥೆಯ ವಾದವನ್ನು ಆಸ್ಟ್ರೇಲಿಯನ್ ಫೈರ್ ವರ್ಕ್ ಕಮಿಷನ್ ತಿರಸ್ಕರಿಸಿದೆ. ಗಾಝಾದ ಮಂದಿಯನ್ನು ಇಸ್ರೇಲ್ ಉದ್ದೇಶಪೂರ್ವಕವಾಗಿ ಹಸಿವಿಗೆ ದೂಡಿ ಕೊಲೆಗೈಯುತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ಮಾಡಿತ್ತು. ಅದನ್ನೇ ಲಾತೂಫ್ ಅವರು ಹಂಚಿಕೊಂಡಿದ್ದರು. ಆ ಬಳಿಕವೇ ಅವರನ್ನು ಕೆಲಸದಿಂದ ಕೈಬಿಟ್ಟಿರುವುದನ್ನು ಸಂಸ್ಥೆ ಅವರಿಗೆ ಸೂಚಿಸಿದೆ.
ಇದೇ ವೇಳೆ ಲಾತೂಫ್ ಅವರ ಪ್ರಕರಣವು ಕಮಿಷನ್ ನ ವ್ಯಾಪ್ತಿಗೆ ಬರುವುದಿಲ್ಲ ಎಂಬ ಆಸೆಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ನ ವಾದವೇ ಅವರು ಈ ಕಾರಣಕ್ಕಾಗಿಯೇ ಲಾತುಫ್ ಅವರನ್ನು ಕೆಲಸದಿಂದ ಕೈಬಿಟ್ಟಿದ್ದಾರೆ ಎಂಬುದನ್ನು ಸಮರ್ಥಿಸುತ್ತದೆ ಎಂದು ಕಮಿಷನ್ ತನ್ನ 50 ಪುಟಗಳ ತೀರ್ಪಿನಲ್ಲಿ ಹೇಳಿದೆ. ಇದೇ ವೇಳೆ ಲಾತುಫ್ ಅವರು ಮತ್ತೆ ಇಸ್ರೇಲ್ ವಿರುದ್ಧದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮಕ್ಕಳನ್ನು ಉದ್ದೇಶಪೂರ್ವಕವಾಗಿ ಇಸ್ರೇಲ್ ಹಸಿವಿಗೆ ದೂಡಿ ಕೊಲ್ಲುತ್ತಿದೆ ಅನ್ನುವುದನ್ನು ನಾನು ಮತ್ತೆ ಮತ್ತೆ ಪೋಸ್ಟ್ ಮಾಡುವೆ ಮತ್ತು ಮತ್ತೆ ಮತ್ತೆ ಹೇಳುತ್ತಿರುವೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth