ಪಶ್ಚಿಮ ಬಂಗಾಳ, ಹರ್ಯಾಣ ಮತ್ತು ರಾಜಸ್ಥಾನ ಬಿಜೆಪಿಯನ್ನು ತಿರಸ್ಕರಿಸಿವೆ: ಸಚಿನ್ ಪೈಲಟ್ ಹೇಳಿಕೆ - Mahanayaka
5:56 AM Wednesday 23 - October 2024

ಪಶ್ಚಿಮ ಬಂಗಾಳ, ಹರ್ಯಾಣ ಮತ್ತು ರಾಜಸ್ಥಾನ ಬಿಜೆಪಿಯನ್ನು ತಿರಸ್ಕರಿಸಿವೆ: ಸಚಿನ್ ಪೈಲಟ್ ಹೇಳಿಕೆ

05/06/2024

2024 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು ನಿರೀಕ್ಷಿತ ಸಂಖ್ಯೆಯನ್ನು ಪಡೆಯುವಲ್ಲಿ ವಿಫಲವಾಗಿದೆ. ಈ ಕುರಿತು ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಅವರು, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳು ಬಿಜೆಪಿಯನ್ನು ತಿರಸ್ಕರಿಸಿವೆ ಎಂದು ಹೇಳಿದರು. “ಮಂದಿರ-ಮಸೀದಿ” ಮತ್ತು “ಹಿಂದೂ-ಮುಸ್ಲಿಂ” ಎಂಬ ಬಿಜೆಪಿಯ ನಿರೂಪಣೆಯನ್ನು ಜನರು ಇಷ್ಟಪಡುವುದಿಲ್ಲ ಎಂದು ಪೈಲಟ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ತನ್ನ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಿದ್ದ ರಾಜ್ಯಗಳನ್ನು ಅಲ್ಲಿನ ಜನರು ತಿರಸ್ಕರಿಸಿದ್ದಾರೆ. ನಾವು ಎತ್ತಿದ ವಿಷಯಗಳು ಜನರಿಗೆ ಇಷ್ಟವಾದವು. ನಮ್ಮ ನಿರೂಪಣೆ ಆಶಾದಾಯಕವಾಗಿತ್ತು, ಬಿಜೆಪಿಯ ಮಂದಿರ-ಮಸೀದಿ, ಹಿಂದೂ-ಮುಸ್ಲಿಂ ಮತ್ತು ಮಂಗಳಸೂತ್ರ ವಿಚಾರವನ್ನು ಜನರು ಇಷ್ಟಪಡಲಿಲ್ಲ ಅಂದ್ರು.

ಪಕ್ಷದ ಮುಂದಿನ ಕಾರ್ಯತಂತ್ರಗಳ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, ಮೈತ್ರಿ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
“ಆಡಳಿತ ಪಕ್ಷಕ್ಕೆ ಅವರು ನೀಡುತ್ತಿರುವ ಆಡಳಿತ ಸ್ವೀಕಾರಾರ್ಹವಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರ್ವಜನಿಕರು ನೀಡಿದ್ದಾರೆ. ಅದಕ್ಕಾಗಿಯೇ ಅವರ ಒಟ್ಟು ಸಂಖ್ಯೆ 60 ರಿಂದ 65 ಸ್ಥಾನಗಳಿಗೆ ಇಳಿದಿದೆ. ಇದು ಇವಿಎಂ ಮೂಲಕ ಸಾರ್ವಜನಿಕರಿಂದ ಬಂದ ರಾಜಕೀಯ ಸಂದೇಶವಾಗಿದೆ ಮತ್ತು ಬಿಜೆಪಿ ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ