ಜೀವಂತವಿರುವಾಗಲೇ ಯುವಕನನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿದ ವೈದ್ಯ | ಆ ಬಳಿಕ ನಡೆದದ್ದೇನು ಗೊತ್ತಾ? - Mahanayaka
12:48 AM Wednesday 12 - March 2025

ಜೀವಂತವಿರುವಾಗಲೇ ಯುವಕನನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿದ ವೈದ್ಯ | ಆ ಬಳಿಕ ನಡೆದದ್ದೇನು ಗೊತ್ತಾ?

02/03/2021

ಬಾಗಲಕೋಟೆ: ಯುವಕ ಜೀವಂತವಿರುವಾಗಲೇ ಯುವಕನ ದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿದ ಘಟನೆ ಇಲ್ಲಿನ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಇಲ್ಲಿನ ಡಾಕ್ಟರ್ ಗೆ ಯಾರು ವೈದ್ಯ ಎಂದು ಸರ್ಟಿಫಿಕೆಟ್ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ ಮನುಷ್ಯನ ಹೃದಯ ಬಡಿತ ಕೂಡ ನೆಟ್ಟಗೆ ನೋಡಲು ಬಾರದೇ ಪೋಸ್ಟ್ ಮಾರ್ಟಂಗೆ ಕಳುಹಿಸಿದ್ದಾರೆ.

ಫೆ.27ರಂದು ಬಾಗಲಕೋಟೆ ಜಿಲ್ಲೆಯ ರಬಕವಿಬನಕಟ್ಟೆ ತಾಲೂಕಿನ ಮಹಾಲಿಂಗಪುರ ರಬಕವಿ ರಸ್ತೆಯಲ್ಲಿ 27 ವರ್ಷ ವಯಸ್ಸಿನ ಶಂಕರ್ ಗೊಂಬಿ ಅಪಘಾತಕ್ಕೀಡಾಗಿದ್ದರು. ತಲೆಗೆ ಏಟು ಬಿದ್ದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದರು.

ಗಂಭೀರ ಸ್ಥಿತಿಯಲ್ಲಿದ್ದ ಶಂಕರ್ ನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಖಾಸಗಿ ಆಸ್ಪತ್ರೆಯ ವೈದ್ಯರು, ಈತ ಬದುಕುವ ಸಾಧ್ಯತೆ ಇಲ್ಲ ಎಂದು ವೆಂಟಿಲೇಟರ್ ಅಳವಡಿಸಿ ಆಂಬುಲೆನ್ಸ್ ನಲ್ಲಿ ಮಹಾಲಿಂಗಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.


Provided by

ತೀವ್ರವಾಗಿ ಗಾಯಗೊಂಡಿದ್ದರಿಂದ  ಯುವಕನ ಶರೀರದಲ್ಲಿ ಚಲನೆಯೇ ಇರಲಿಲ್ಲ. ಇದರಿಂದಾಗಿ ಯುವಕ ಆಂಬುಲೆನ್ಸ್ ಸಿಬ್ಬಂದಿ ಕೂಡ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಕೊಂಡಿದ್ದರು. ಆಸ್ಪತ್ರೆ ವೈದ್ಯರು ಕೂಡ ಪರಿಶೀಲಿಸಿ ಯುವಕ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ.

ಇತ್ತ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ ಆತನ ಗೆಳೆಯರು ತೀವ್ರವಾಗಿ ನೋವು ಅನುಭವಿಸಿ ಕಣ್ಣೀರು ಹಾಕಿದ್ದಾರೆ. ಫೇಸ್ ಬುಕ್ ವಾಟ್ಸಾಪ್ ನಲ್ಲಿ “ಮರಳಿ ಬಾರದೂರಿಗೆ ನಿನ್ನ ಪಯಣ” ಎನ್ನುವ ಹಾಡಿಗೆ ಯುವಕ ಶಂಕರ್ ನ ಫೋಟೋ ಅಳವಡಿಸಿ ಶೇರ್ ಮಾಡಿದ್ದಾರೆ. ಸಂಬಂಧಿಕರು, ಕುಟುಂಬಸ್ಥರು ತೀವ್ರವಾಗಿ ಶೋಕದಲ್ಲಿ ಮುಳುಗಿದ್ದಾರೆ.

ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಯುವಕನನ್ನು ಪೋಸ್ಟ್ ಮಾರ್ಟಂ ಮಾಡಲು ಕಳುಹಿಸಲಾಗಿದೆ. ಈ ವೇಳೆ ವೈದ್ಯರಿಗಿಂತಲೂ ಹೆಚ್ಚು ಅನುಭವ ವಿರುವ ಪೋಸ್ಟ್ ಮಾರ್ಟಂ ಮಾಡುತ್ತಿರುವವರಿಗೆ ಯುವಕ ಇನ್ನೂ ಜೀವಂತವಾಗಿದ್ದಾನೆ ಎನ್ನುವುದು ತಿಳಿದಿದೆ.

ಯುವಕನ ಭುಜ, ಕಾಲುಗಳನ್ನು ಅಲುಗಾಡಿಸಿ ನೋಡಿದಾಗ ಯುವಕ ಉಸಿರಾಟ ನಡೆಸುತ್ತಿರುವುದು ತಿಳಿದು ಬಂದಿದೆ. ಅವರು ತಕ್ಷಣವೇ ಯುವಕ ಜೀವಂತವಿದ್ದಾನೆ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಇದೀಗ ಮತ್ತೆ ಯುವಕನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಯುವಕ ಜೀವಂತವಾಗಿದ್ದಾನೆ ಎನ್ನುವ ವಿಷಯ ಗೆಳೆಯರಿಗೆ ತಿಳಿದು ಬಂದಿದೆ.  ತಕ್ಷಣವೇ ಅವರು ತಮ್ಮ ಪೋಸ್ಟರ್ ಗಳನ್ನು ಡಿಲೀಟ್ ಮಾಡಿದ್ದಾರೆ.

whatsapp

ಇತ್ತೀಚಿನ ಸುದ್ದಿ