ಅಯೋಧ್ಯೆಯ ಪೈಜಾಬಾದ್ ನಲ್ಲಿ ಬಿಜೆಪಿಗೆ ಹೀನಾಯ ಸೋಲು: ಕಮಲ ಪಾಳಯಕ್ಕೆ ತೀವ್ರ ಮುಖಭಂಗ

ಅಯೋಧ್ಯೆಯ ಪೈಜಾಬಾದ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಎದುರಾಗಿರುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾಗಿದೆ. ಬಿಜೆಪಿಯನ್ನು ತೀವ್ರ ಮುಖಭಂಗಕ್ಕೂ ಒಳಪಡಿಸಿದೆ. ಬಿಜೆಪಿಯ ಲಲ್ಲು ಸಿಂಗ್ ಅವರನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿ ಸೋಲಿಸಿದ್ದಾರೆ. ಇದೀಗ ಬಿಜೆಪಿಗೆ ಈ ಮುಖಭಂಗ ಯಾಕಾಯಿತು ಎಂಬುದನ್ನು ಅಲ್ಲಿಯ ಈ ರಿಕ್ಷಾ ಚಾಲಕರು ಬಹಿರಂಗಪಡಿಸಿದ್ದಾರೆ.
ಚುನಾವಣೆಗಿಂತ ತಿಂಗಳುಗಳ ಮೊದಲು ರಾಮಮಂದಿರವನ್ನು ಉದ್ಘಾಟಿಸಲಾಗಿತ್ತು. ಇದರಿಂದಾಗಿ ಬಿಜೆಪಿಗೆ ಚುನಾವಣೆಯಲ್ಲಿ ಭಾರಿ ಲಾಭವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ರಾಮ ಮಂದಿರ ಇರುವ ಅಯೋಧ್ಯ ಕ್ಷೇತ್ರದ ಮತದಾರರೇ ಬಿಜೆಪಿಯನ್ನು ತಿರಸ್ಕರಿಸಿದರು.
ರಾಮ ಮಂದಿರ ಇರುವ ಪರಿಸರದ ಮಂದಿ ದಿನದಲ್ಲಿ ಇನ್ನೂರು ರೂಪಾಯಿಯನ್ನು ಕೂಡ ಸಂಪಾದಿಸಲು ಸಾಧ್ಯವಾಗುತ್ತಿಲ್ಲ ಎಂದು ಇದೀಗ ಹೇಳಿದ್ದಾರೆ. ಉದ್ಘಾಟನೆಯ ಆರಂಭದ ವಾರದಲ್ಲಿ ಭಾರಿ ಯಾತ್ರಿಕರು ಇಲ್ಲಿಗೆ ಆಗಮಿಸಿದ್ದರು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಸರಕಾರ ನಮ್ಮನ್ನು ನಿರ್ಲಕ್ಷಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಾವು ಇಲ್ಲಿ ರಿಕ್ಷಾ ಓಡಿಸುತ್ತಿದ್ದೇವೆ. ಇಲ್ಲಿನ ಮೂಲಭೂತ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಸ್ತೆಗಳು ಸುಗಮವಾಗಿಲ್ಲ. ರಾಮ ಮಂದಿರ ನಿರ್ಮಿಸಿರುವುದನ್ನು ಬಿಟ್ಟರೆ ಬೇರೆ ಯಾವುದೇ ಬದಲಾವಣೆಗಳು ಈ ಕ್ಷೇತ್ರದಲ್ಲಿ ಆಗಿಲ್ಲ.
ಬಿಜೆಪಿಯ ಅಭ್ಯರ್ಥಿ ಕೂಡ ಇದನ್ನು ಯಾವ ರೀತಿಯಲ್ಲಿಯೂ ಅಡ್ರೆಸ್ ಮಾಡಿಲ್ಲ. ನಮ್ಮ ಆದಾಯ ಈಗ ತುಂಬಾ ಕುಸಿದಿದೆ. ದಿನದಲ್ಲಿ 500 ರಿಂದ 800 ರೂಪಾಯಿ ಸಂಪಾದಿಸುತ್ತಿದ್ದ ನಾವು ಇದೀಗ 250ಕ್ಕೆ ತೃಪ್ತಿಪಡುವ ಪರಿಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth