ದರ್ಶನ್ ಜೊತೆಗಿನ ಹಳೆಯ ಘಟನೆಗಳನ್ನು ನೆನಪಿಸಿಕೊಂಡ ನಿರ್ಮಾಪಕ ಉಮಾಪತಿ ಗೌಡ! - Mahanayaka
8:17 PM Thursday 12 - December 2024

ದರ್ಶನ್ ಜೊತೆಗಿನ ಹಳೆಯ ಘಟನೆಗಳನ್ನು ನೆನಪಿಸಿಕೊಂಡ ನಿರ್ಮಾಪಕ ಉಮಾಪತಿ ಗೌಡ!

umapati darshan
19/06/2024

ರೇಣುಕಾಸ್ವಾಮಿ ಎನ್ನುವಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನವಾಗಿದ್ದು, ಇದೀಗ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಗೌಡ ಟೀಕೆ ಮಾಡಿದ್ದಾರೆ. ಉಮಾಪತಿ ಗೌಡ ನಟ ದರ್ಶನ್‌ ವಿರುದ್ಧ ಮೊದಲಿನಿಂದಲೂ ಕಿಡಿಕಾರುತ್ತಲೇ ಬಂದಿದ್ದು, ಇದೀಗ ಮತ್ತೊಮ್ಮೆ, ನಟನ ವಿರುದ್ಧ ಟೀಕೆ ಮಾಡಿದ್ದಾರೆ.

ಮಾಡಿದ ಪಾಪ ಕರ್ಮಗಳು ಅವರನ್ನೇ ಕಿತ್ತು ತಿನ್ನುತ್ತಿದೆ. ನಾನು ದರ್ಶನ್ ಅವರಿಂದ ದೂರಾಗಿದ್ದು ಒಳ್ಳೆಯದ್ದೇ ಆಯಿತು. ಭಗವಂತ ನನ್ನನ್ನು ಕಾಪಾಡಿದ. ವ್ಯಕ್ತಿ ಬೆಳೆಯಬೇಕಾದ್ರೆ, ಗುರು ಮತ್ತು ಗುರಿ ಇರಬೇಕು. ಇಲ್ಲ ಅಂದ್ರೆ ಈ ರೀತಿ ಆಗುತ್ತದೆ. ಇನ್ನು ಕೋಟಿ ಆಸ್ತಿ, ಬೆಲೆ ಬಾಳುವ ಕಾರು, ಮನೆ ಇದ್ಯಾವುದು ಲೆಕ್ಕಕ್ಕೆ ಬರೋದಿಲ್ಲ, ದೇಹದಲ್ಲಿ ರೋಗ ಇದ್ರೆ ಏನು ಪ್ರಯೋಜನ. ದರ್ಶನ್ ಗೆ ಸ್ವಲ್ಪ ಕೋಪ ಜಾಸ್ತಿ ಎಂದು ಉಮಾಪತಿ ಗೌಡ  ಹೇಳಿದ್ದಾರೆ.

ದರ್ಶನ್ ಗೆ ಯಾರ ಸಹವಾಸನೋ ಗೊತ್ತಿಲ್ಲ ಇಂದು ಹೀಗಾಗಿದ್ದಾರೆ. ಅವರು ಮಾಡಿರೋದು ಅಪರಾಧ. ಕಾನೂನಿನಲ್ಲಿ ಏನಾಗುತ್ತೋ ಆಗಲಿ. ರೇಣುಕಾ ಸ್ವಾಮಿ ಕುಟುಂಬದ ಜತೆ ನಾನು ನಿಲ್ಲುತ್ತೇನೆ. ದರ್ಶನ್ ರಿಂದ ಇದುವರೆಗೂ ಶೋಷಣೆಗೆ ಒಳಗಾದವರು ಹಲವರು ಇದ್ದಾರೆ. ಅವರು ಈ ಕೊಲೆಗೆ ಕಾರಣ ಯಾಕಂದ್ರೆ ದರ್ಶನ್ ದಬ್ಬಾಳಿಕೆ ಯನ್ನು ಸಹಿಸಿಕೊಂಡು ಬಂದಿರೋದು ತಪ್ಪು. ಇದನ್ನ ವಿರೋಧಿಸಬೇಕು. ಮಾಡಿರೋ ಕರ್ಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪು ಮಾಡಿದರೆ ಶಿಕ್ಷೆ ಆಗಲೇ ಬೇಕು ಎಂದು ಹೇಳಿದ್ದಾರೆ.

ಇನ್ನು ತನಗೆ ಎರಡು ಮುಖವಿದೆ ಎಂದು ದರ್ಶನ್‌ ಹೇಳಿರುವ ಮಾತಿಗೂ ಪ್ರತಿಕ್ರಿಯೆ ನೀಡಿದ ಉಮಾಪತಿ, ‘ದರ್ಶನ್ ಎರಡು ಮುಖ ಏನು ಅಂತ ಗೊತ್ತಾಗಿದೆ. ಮೈಸೂರಲ್ಲಿ ನನ್ನ ಮೇಲೆ ಗನ್ ಇಟ್ಟಿದ್ದರು. ನನ್ನನ್ನು ಶೂಟ್‌ ಮಾಡೋಕೆ ಪ್ರಯತ್ನ ಮಾಡಿದ್ರು.

ಇನ್ನು ಎಣ್ಣೆ ಏಟಲ್ಲಿ ಸಾಕಷ್ಟು ಗಲಾಟೆ ಆಗಿವೆ. ಎಣ್ಣೆ ಕೊಡಿಸಿದ್ದು ಕಡಿಮೆ ಆಯ್ತು ಅಂತ ರಾಬರ್ಟ್ ಸಿನಿಮಾ ಬಿಡುಗಡೆಗೆ ತೊಂದರೆ ಮಾಡಿದ್ದೂ ಇದೆ. ಅವತ್ತು ದರ್ಶನ್ ಜತೆ ಗಲಾಟೆ ಆದಾಗ ನನ್ನ ಮಗಳು ಬಂದು ನನ್ನ ತಬ್ಬಿಕೊಂಡು ಅತ್ತಿದ್ದಳು. ಬೇಸರದಿಂದ ನನ್ನ ಅಮ್ಮ ದೇವರ ಮೇಲೆ ಎಲ್ಲವನ್ನೂ ಬಿಡು ಅಂಥ ಹೇಳಿದ್ದರು. ಇವತ್ತು ಆತನ ಸ್ಥಿತಿ ಹೀಗಾಗಿದೆ ಎಂದು ಉಮಾಪತಿ ಗೌಡ ಟೀಕೆ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ