ಈ ಹಳ್ಳಿಯಲ್ಲಿ ನಡೆಯುತ್ತದೆ ರಾವಣನ ಪೂಜೆ | 10 ತಲೆಯ 20 ಕೈಗಳ ರಾವಣನ ಪ್ರತಿಮೆ ಏನನ್ನು ಹೇಳುತ್ತಿದೆ? - Mahanayaka
5:06 PM Wednesday 11 - December 2024

ಈ ಹಳ್ಳಿಯಲ್ಲಿ ನಡೆಯುತ್ತದೆ ರಾವಣನ ಪೂಜೆ | 10 ತಲೆಯ 20 ಕೈಗಳ ರಾವಣನ ಪ್ರತಿಮೆ ಏನನ್ನು ಹೇಳುತ್ತಿದೆ?

25/10/2020

ಸಂಗೋಲಾ: ಭಾರತ ದೇಶವು ವಿಭಿನ್ನ ಸಂಸ್ಕೃತಿಗಳ ದೇಶವಾಗಿದೆ. ಇಲ್ಲಿನ ಪುರಾಣ ಕಥೆಗಳು ಹಾಗೂ ವಾಸ್ತವತೆಯ ನಡುವೆ ಯಾವಾಗಲೂ ತಿಕ್ಕಾಟ ಆಗುತ್ತಲೇ ಇರುತ್ತವೆ. ದಸರ ಸಂದರ್ಭದಲ್ಲಿ ರಾವಣನನ ಪ್ರತಿಕೃತಿ ದಹಿಸುವ ಮೂಲಕ ರಾಕ್ಷಸನನ್ನು ಸುಟ್ಟು ಹಾಕಿದೆವು ಎನ್ನುವ ಆಚರಣೆ ಒಂದೆಡೆಯಾದರೆ, ಮಹಾರಾಷ್ಟ್ರದ ಅಕೋಲದ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ರಾವಣನನ್ನು ಪೂಜೆ ಮಾಡಲಾಗುತ್ತದೆ.

ರಾವಣ ಬೌದ್ಧ ಮಹಾರಾಜ. ಧರ್ಮಿಷ್ಟ ಮತ್ತು ಬುದ್ಧಿವಂತ ರಾಜ. ಧ್ಯಾನದ ಮೂಲಕ ಪುಷ್ಪಕ ವಿಮಾನವನ್ನು ಕಂಡು ಹಿಡಿದ ಮೊದಲ ವಿಜ್ಞಾನಿ ಎಂಬೆಲ್ಲ ಬಿರುದುಗಳು ರಾವಣನಿಗಿದೆ. ಈ ಗ್ರಾಮದಲ್ಲಿ ಹೇಳುವಂತೆ ರಾಮ ಎಂದೂ ರಾವಣನನ್ನು ಕೊಂದಿಲ್ಲ, ರಾಮಾಯಣ ಅನ್ನೋದು ನಡೆದೇ ಇಲ್ಲ ಎಂದು ಹೇಳುತ್ತಾರೆ. ಬಹುತೇಕರು ರಾಮಾಯಣ ಎನ್ನುವುದು ಒಂದು ಕಾಲ್ಪಿತ ಕಥೆ, ರಾವಣನ್ನು ಭ್ರಮಿಸಿ ಬರೆಯಲಾಗಿದೆಯೇ ಹೊರತು ಇದು ನಿಜವಲ್ಲ ಎಂದೇ ಹೇಳುತ್ತಾರೆ. ಇದೇ ವಾದವನ್ನು ಶ್ರೀಲಂಕಾ ಕೂಡ ಮಾಡುತ್ತಿದೆ. ರಾಮಾಯಣದಲ್ಲಿ ಹೇಳಿರುವಂತಹ ಒಂದು ಯುದ್ಧವೇ ನಡೆದಿಲ್ಲ ಎಂದು ಲಂಕನ್ನರು ಹೇಳುತ್ತಾರೆ.

mahanayaka

ಅಕೋಲಾ ಜಿಲ್ಲೆಯಲ್ಲಿ ನಡೆಯುತ್ತಿರುವ ಆಚರಣೆ ಇದು ಮೊದಲ ಆಚರಣೆಯೇನಲ್ಲ. ಸುಮಾರು 300 ವರ್ಷಕ್ಕಿಂತಲೂ ಹಿಂದಿನಿಂದಲೂ ಈ ಆಚರಣೆ ನಡೆಯುತ್ತಲೇ ಬರುತ್ತಿದೆಯಂತೆ. ಬುದ್ಧಿಯ ಸಂಕೇತವಾದ 20 ತಲೆ, ಸಾಮರ್ಥ್ಯದ ಸಂಕೇತವಾದ 10 ಕೈಗಳು, ಮೂಲನಿವಾಸಿ ಲಕ್ಷಣದ ಕಪ್ಪು ಬಣ್ಣದ ಪ್ರತಿಮೆಯನ್ನು ಗ್ರಾಮದ ಮಧ್ಯೆ ನಿಲ್ಲಿಸಲಾಗಿದೆ. ಅಲ್ಲಿ ಎಲ್ಲರೂ ರಾವಣನಿಗೆ ಪೂಜೆ ಸಲ್ಲಿಸುತ್ತಾರೆ.

“ಇಲ್ಲಿ ಅನಾದಿ ಕಾಲದಿಂದಲೂ ರಾವಣನ ಪೂಜೆ ನಡೆಯುತ್ತಿದೆ. ಈ ಹಳ್ಳಿಯ ಸಂತೋಷ, ಶಾಂತಿ, ನೆಮ್ಮದಿ, ತೃಪ್ತಿಗಳಿಗೆ ರಾವಣನೇ ಕಾರಣ ಎಂದು ನಾವು ನಂಬುತ್ತೇವೆ ಎಂದು ದೇವಾಲಯದ ಅರ್ಚಕ ಹೇಳುತ್ತಾರೆ.

ವಿಡಿಯೋ ನೋಡಿ

ಈ ಅದ್ಭುತವಾಗಿರುವ ರಾವಣನ ಪ್ರತಿಮೆಯನ್ನು ನೋಡಲು ದೇಶ ವಿದೇಶಗಳಿಂದ ಪ್ರತಿ ವರ್ಷ ದಸರ ಸಂದರ್ಭದಲ್ಲಿ  ಜನರು ಭೇಟಿ ನೀಡುತ್ತಾರೆ. ಬಂದವರೆಲ್ಲರೂ ರಾವಣನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಈ ಬಾರಿ ಕೊವಿಡ್ 19 ಕಾರಣದಿಂದಾಗಿ ಹಬ್ಬದಲ್ಲಿ ಹೆಚ್ಚು ಜನರನ್ನು ನಿರೀಕ್ಷಿಸಲು ಸಾಧ್ಯ ಇಲ್ಲ ಎಂದು ಅವರು ಹೇಳಿದರು. ದಸರ ಸಂದರ್ಭದಲ್ಲಿ  ಎರಡು ವಿಭಿನ್ನ ಸಂಸ್ಕೃತಿಗಳು ದೇಶದಲ್ಲಿ ಕಂಡು ಬರುತ್ತವೆ. ಆರ್ಯರು ಹಾಗೂ ಮೂಲನಿವಾಸಿಗಳ ಸಾಂಸ್ಕೃತಿಕ ತಿಕ್ಕಾಟ ಪ್ರತಿಬಾರಿಯೂ ಕಂಡು ಬರುತ್ತದೆ. ಕರ್ನಾಟಕದ ಮೈಸೂರಿನಲ್ಲಿ ಮಹಿಷಾ ದಸರ ಕೂಡ ನಡೆಯುತ್ತದೆ. ಮಹಿಷಾ ಮಂಡಲದ ದೊರೆ ಮಹಿಷಾಸುರನ ಹೆಸರಿನಲ್ಲಿ ಮಹಿಷಾ ದಸರ ನಡೆಯುತ್ತದೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಬುದ್ಧನೆಡೆಗೆ: ವಿಡಿಯೋ ನೋಡಿ

https://www.youtube.com/playlist?list=PLmhXXiZk8k2KLBbX74SWcGk-Ye5IZElgz

ಇತ್ತೀಚಿನ ಸುದ್ದಿ