ಪವರ್ ಕಟ್ ಆದ ಬೆನ್ನಲ್ಲೇ ವಾಟ್ಸಾಪ್ ನಲ್ಲಿ ರಮೇಶ್ ಜಾರಕಿಹೊಳಿ ವಿಡಿಯೋ ವೈರಲ್!
ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ತಮ್ಮ ಬೆಂಗಾವಲು ಪಡೆಯನ್ನು ಬಿಟ್ಟು ಏಕಾಂಗಿಯಾಗಿ ಅವರು ಹೋಗಿದ್ದಾರೆ. ಇದಲ್ಲದೇ ಮಾಧ್ಯಮವೊಂದರ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಇದು ಸೃಷ್ಟಿಸಿದ ವಿಡಿಯೋ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.
ನಿನ್ನೆ ವಿಡಿಯೋ ವಿಡಿಯೋ ಬಿಡುಗಡೆಯಾದ ತಕ್ಷಣವೇ ಬೆಳಗಾವಿಯಲ್ಲಿ ಪವರ್ ಕಟ್ ಆಗಿದೆ. ಇದಾದ ಬೆನ್ನಲ್ಲೇ ವಾಟ್ಸಾಪ್ ಗಳಲ್ಲಿ ಸಚಿವರ ಅಶ್ಲೀಲ ವಿಡಿಯೋ ಬಿಡುಗಡೆಯಾಗಿದೆ. ಗೋಕಾಕ್ ಕ್ಷೇತ್ರದಲ್ಲಿ ಸಂಜೆಯಿಂದಲೇ ಪವರ್ ಕಟ್ ಆಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಮಾಧ್ಯಮವೊಂದಕ್ಕೆ ನಿನ್ನೆ ಹೇಳಿಕೆ ನೀಡಿದ ರಮೇಶ್ ಜಾರಕಿಹೊಳಿ, ಮೊದಲನೆಯದಾಗಿ ನನಗೆ ದಿನೇಶ್ ಕಲ್ಲಹಳ್ಳಿ ಯಾರು ಎಂಬುದು ಗೊತ್ತಿಲ್ಲ. ನಾನು 21 ವರ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ತುಂಬಾ ಸೂಕ್ಷ್ಮ ವ್ಯಕ್ತಿ. ಇದರ ಬಗ್ಗೆ ಪರಿಪೂರ್ಣ ತನಿಖೆ ನಡೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ನಮ್ಮದು ದೊಡ್ಡ ರಾಜಕೀಯ ಕುಟುಂಬ. ಇದು ನಿಜಕ್ಕೂ ನನಗೆ ದೊಡ್ಡ ಶಾಕ್ ನೀಡಿದೆ. ಈ ವಿಡಿಯೋ ಕಂಪ್ಲಿಟ್ ಸೃಷ್ಟಿ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆ ಹೆಣ್ಣು ಮಗಳು ಯಾರು ಎಂಬುದು ನನಗೆ ಗೊತ್ತಿಲ್ಲ. ಇದುವರೆಗೂ ಕೇಳಿಬರದ ಆರೋಪ ಈಗ ಹೇಗೆ ಕೇಳಿಬಂತು ಹೇಳಿ. ಇದರ ಬಗ್ಗೆ ಮೊದಲು ಸಂಪೂರ್ಣ ತನಿಖೆಯಾಗಲಿ. ನಾನು ಯಾವುದಕ್ಕೂ ಹೆದರಲ್ಲ. ಸತ್ಯ ಗೆಲ್ಲುತ್ತೆ ಎಂದು ಹೇಳಿದ್ದಾರೆ.