ತನಗೆ ಮಕ್ಕಳಾಗಲಿಲ್ಲ ಎಂದು ತನ್ನ ಭಾವನ ಮೇಲೆ ಸೇಡು ತೀರಿಸಿದ ಮಹಿಳೆ!
ಹೈದರಾಬಾದ್: ತನಗೆ ಮಕ್ಕಳಾಗಿಲ್ಲ ಎಂದು ಯುವತಿಯೊಬ್ಬಳು ತನ್ನ ಭಾವನ ಮೇಲೆ ಸೇಡು ತೀರಿಸಿದ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದಿದ್ದು, ತನಗೆ ಮಕ್ಕಳಾಗಿಲ್ಲ ಎಂದು ತೀವ್ರವಾಗಿ ಕುಗ್ಗಿ ಹೋಗಿದ್ದ ಮಹಿಳೆ ಅನಾಹುವನ್ನೇ ಸೃಷ್ಟಿಸಿದ್ದಾಳೆ.
ತೆಲಂಗಾಣದ ಹೈದರಾಬಾದ್ ನಲ್ಲಿ ಮೊಹಮ್ಮದ್ ಈತಶಾಮುದ್ದೀನ್ ಮತ್ತು ಶುಜಾದ್ದೀನ್ ಎಂಬ ಹೆಸರಿನ ಅಣ್ಣ ತಮ್ಮಂದಿರು ಜೊತೆಯಾಗಿ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಈತಶಾಮುದ್ದೀನ್ ಗೆ ಮದುವೆಯಾಗಿ ಮೂರು ವರ್ಷದ ಮಗು ಇತ್ತು. ಶುಜಾದ್ದೀನ್ ಗೆ ಒಂದು ವರ್ಷದ ಹಿಂದೆ 22 ವರ್ಷ ವಯಸ್ಸಿನ ಐಶಾ ಎಂಬ ಯುವತಿಯ ಜೊತೆಗೆ ವಿವಾಹವಾಗಿತ್ತು.
ಮದುವೆಯಾಗಿ ಒಂದು ವರ್ಷವಾದರೂ ಐಶಾಗೆ ಗರ್ಭ ನಿಂತಿರಲಿಲ್ಲ. ಇದರಿಂದಾಗಿ ಆಕೆ ತೀವ್ರವಾಗಿ ನೊಂದಿದ್ದಳು. ಇತ್ತ ಆಕೆಯ ಪತಿ ಶುಜಾದ್ದೀನ್ ತನ್ನ ಅಣ್ಣನ ಮಗಳನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದಾನೆ. ಇದರಿಂದಾಗಿ ಐಶಾ ಮಾನಸಿಕವಾಗಿ ತೀವ್ರವಾಗಿ ಕುಗ್ಗಿ ಹೋಗಿದ್ದಾಳೆ.
ಒಂದು ದಿನ ಬಾವನ ಮಗಳನ್ನು ಎರಡನೇ ಮಹಡಿಗೆ ಕರೆದೊಯ್ದು ಕೈಗಳನ್ನು ಕಟ್ಟಿ ಹಾಕಿದ ಆಕೆ ಎರಡನೇ ಮಹಡಿಯಿಂದ ದೂಡಿ ಹಾಕಿದ್ದಾಳೆ. ಮೇಲಿನಿಂದ ನೆಲಕ್ಕೆ ಅಪ್ಪಳಿಸಿರುವ ಮಗು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.