ಹಾಸ್ಟೆಲ್ ಬಾಲಕಿಯರನ್ನು ಬಟ್ಟೆ ಬಿಚ್ಚಿಸಿ ಡಾನ್ಸ್ ಮಾಡಿಸಿದ ಪೊಲೀಸರು! - Mahanayaka
8:13 AM Thursday 12 - December 2024

ಹಾಸ್ಟೆಲ್ ಬಾಲಕಿಯರನ್ನು ಬಟ್ಟೆ ಬಿಚ್ಚಿಸಿ ಡಾನ್ಸ್ ಮಾಡಿಸಿದ ಪೊಲೀಸರು!

03/03/2021

ಮುಂಬೈ: ಹಾಸ್ಟೆಲ್ ಬಾಲಕಿಯರಿಂದ ಬಟ್ಟೆ ಬಿಚ್ಚಿಸಿ ಬಲವಂತವಾಗಿ ಡಾನ್ಸ್ ಮಾಡಿಸಿದ ಘಟನೆ ಮಹಾರಾಷ್ಟ್ರದ ಜಲಗಾಂವ್ ನ ಹಾಸ್ಟೆಲ್‌ ನಲ್ಲಿ ನಡೆದಿದ್ದು,  ಈ ಪ್ರಕರಣದ ಉನ್ನತಮಟ್ಟದ ತನಿಖೆಗೆ  ನಾಲ್ಕು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಬುಧವಾರ ತಿಳಿಸಿದ್ದಾರೆ.

ಜಲಗಾಂವ್ ನ ಹಾಸ್ಟೆಲ್ ನ ಕೆಲವು ಹುಡುಗಿಯರನ್ನು ತನಿಖೆ ಮಾಡುವ ನೆಪದಲ್ಲಿ ಹೊರಗಿನ ಕೆಲವು ಜನರು ಹಾಗೂ  ಪೊಲೀಸರಿಗೆ ಹಾಸ್ಟೆಲ್ ಪ್ರವೇಶಿಸಲು ಅನುಮತಿ ನೀಡಲಾಗಿತ್ತು ಎಂದು ಹೇಳಲಾಗಿದೆ.

ಹಾಸ್ಟೆಲ್ ಗೆ ಬಂದ ಪೊಲೀಸರು ಇಲ್ಲಿರುವ ವಿದ್ಯಾರ್ಥಿನಿಯರನ್ನು ಬಟ್ಟೆ ಬಿಚ್ಚುವಂತೆ ಬಲವಂತ ಪಡಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯರಿಂದ ಡಾನ್ಸ್ ಮಾಡಿಸಿ, ವಿಡಿಯೋ ಮಾಡಿಕೊಂಡು ಹೋಗಿದ್ದಾರೆ. ಈ ವಿಡಿಯೋ ಕ್ಲಿಪ್ ಕೂಡ ಬಹಿರಂಗವಾಗಿದೆ.

ಪ್ರತಿಪಕ್ಷ ಸದಸ್ಯರು ಈ ವಿಷಯವನ್ನು ಇಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ನಂತರ ಗೃಹ ಸಚಿವರು ಈ ಘೋಷಣೆ ಮಾಡಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಇದರ ಬಗ್ಗೆ ತನಿಖೆ ನಡೆಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ