10ನೇ ತರಗತಿ ಪಾಸಾದವರಿಗೆ ಏರ್ಪೋರ್ಟ್ ನಲ್ಲಿದೆ ಉದ್ಯೋಗ: ಅರ್ಜಿ ಸಲ್ಲಿಸುವುದು ಹೇಗೆ?
ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸ್ ಲಿಮಿಟೆಡ್, ಇಲಾಖೆಯಲ್ಲಿ 10ನೇ ತರಗತಿ, ಪಿಯುಸಿ, ಪದವಿ, ಡಿಪ್ಲೋಮ ಅಥವಾ ಸ್ನಾತಕೋತ್ತರ ಪದವಿ ಪಾಸಾದವರರಿಂದ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನೇರ ಸಂದರ್ಶನಕ್ಕಾಗಿ ಅರ್ಜಿ ಆಹ್ವಾನಿಸಿದೆ.
AIATSL Recruitment 2024 – ಒಟ್ಟಾರೆ 3256 ಹುದ್ದೆಗಳಿಗೆ ಈ ಒಂದು ನೇಮಕಾತಿ ನಡೆಯುತ್ತಿದ್ದು, ನಿರುದ್ಯೋಗಿ ಯುವಕ, ಯುವತಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಕೇವಲ ಉನ್ನತ ವಿದ್ಯಾರ್ಹತೆ ಹೊಂದಿದವರಿಗೆ ಮಾತ್ರವಲ್ಲದೆ ಹತ್ತನೇ ತರಗತಿ ಪಾಸಾದವರಿಗೂ ಕೂಡ ಇಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ.
ಈ ಉದ್ಯೋಗ ಅವಕಾಶದ ಅರ್ಹತೆಗಳು, ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ಸೇರಿದಂತೆ ಇತರ ಉಪಯುಕ್ತ ಮಾಹಿತಿಗಳನ್ನು ಇಲ್ಲಿ ನೀಡಿದ್ದು ಅಭ್ಯರ್ಥಿಗಳ ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
ಯಾವ ಯಾವ ಹುದ್ದೆಗಳು ಇಲ್ಲಿ ಖಾಲಿ ಇವೆ?:
ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸ್ ಲಿಮಿಟೆಡ್ ನಲ್ಲಿ ಹ್ಯಾಂಡಿಮ್ಯಾನ್, ಸರ್ವಿಸ್ ಎಕ್ಸಿಕ್ಯೂಟಿವ್, ಯುಟಿಲಿಟಿ ಏಜೆಂಟ್ಸ್ ಸೇರಿದಂತೆ ಒಟ್ಟು 3256 ಹುದ್ದೆಗಳಿಗೆ ಈ ಒಂದು ನೇಮಕಾತಿ ನಡೆಯುತ್ತಿದೆ. ಈ ಒಂದು ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆಗಳು:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ, ಡಿಪ್ಲೋಮಾ, ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿದ್ದರೆ ಅರ್ಜಿ ಸಲ್ಲಿಸಬಹುದು. ನೀವು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವುದಾದರೆ ನೀವು ಕನಿಷ್ಠ 28 ವರ್ಷದಿಂದ ಗರಿಷ್ಠ 50 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.
ಸಿಗುವ ವೇತನ: ನೇರ ಸಂದರ್ಶನದಲ್ಲಿ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯು 22,000 ರೂಪಾಯಿಯಿಂದ 75,000 ರೂಪಾಯಿ ವರೆಗೆ ಇರಲಿದೆ.
ಸಂದರ್ಶನದ ವಿಳಾಸ, ಸಮಯ ಮತ್ತು ದಿನಾಂಕ :
ಜೆಎಸ್ ಡಿ ಕಾಂಪ್ಲೆಕ್ಸ್, ಸಹರ ಪೊಲೀಸ್ ಠಾಣೆ ಹತ್ತಿರ
ಸಿ ಎಸ್ ಎಮ್ ಐ ಏರ್ಪೋರ್ಟ್ ಟರ್ಮಿನಲ್ 1,
ಗೇಟ್ ನಂಬರ್ 5, ಸಹರ್, ಅಂದೇರಿ – ಪೂರ್ವ ಮುಂಬೈ – 400099
ಅರ್ಜಿ ಶುಲ್ಕ — ಅರ್ಜಿ ಸಲ್ಲಿಸಲು ಬಯಸುವುದಾದರೆ 500 ರೂಪಾಯಿ ಅರ್ಜಿ ಶುಲ್ಕವನ್ನು ನೀವು ಪಾವತಿಸಬೇಕು. ಆದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ : https://www.aiasl.in/
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: