ಶಾಲೆಯಲ್ಲಿ ಶಿಕ್ಷಕನನ್ನು ಇರಿದು ಕೊಂದ 11ನೇ ತರಗತಿ ವಿದ್ಯಾರ್ಥಿ
ಅಸ್ಸಾಂನ ಶಿವಸಾಗರ್ ಜಿಲ್ಲೆಯ ಶಾಲೆಯೊಂದರಲ್ಲಿ 11 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನನ್ನು ತರಗತಿಯಲ್ಲಿ ಇರಿದು ಕೊಂದ ಘಟನೆ ನಡೆದಿದೆ. ಕಳಪೆ ಸಾಧನೆಗಾಗಿ ಬೈದಿದ್ದಕ್ಕಾಗಿ ರಸಾಯನಶಾಸ್ತ್ರ ಶಿಕ್ಷಕ ರಾಜೇಶ್ ಬರುವಾ ಬೆಜವಾಡ (55) ಮೇಲೆ ಹಲ್ಲೆ ನಡೆಸಿ ಕೊಂದ 16 ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಶ್ರೀ ಬೆಜವಾಡ ಅವರು ರಸಾಯನಶಾಸ್ತ್ರವನ್ನು ಕಲಿಸುತ್ತಿದ್ದರು. ಜೊತೆಗೆ ಖಾಸಗಿ ಒಡೆತನದ ಶಾಲೆಯಲ್ಲಿ ನಿರ್ವಹಣಾ ಜವಾಬ್ದಾರಿಗಳನ್ನು ಸಹ ಹೊಂದಿದ್ದರು.
ರಸಾಯನಶಾಸ್ತ್ರದಲ್ಲಿನ ಕಲಿಕೆಯ ಬಗ್ಗೆ ಶಿಕ್ಷಕರು ನಿನ್ನೆ ವಿದ್ಯಾರ್ಥಿಯನ್ನು ಗದರಿಸಿದ್ದರು. ಅಲ್ಲದೇ ಪೋಷಕರ ಸಭೆಗಾಗಿ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಹೇಳಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ದಿನದ ನಂತರ ವಿದ್ಯಾರ್ಥಿ ಕ್ಯಾಶುಯಲ್ ಬಟ್ಟೆಗಳಲ್ಲಿ ತರಗತಿಗೆ ಬಂದಿದ್ದ. ಶಿಕ್ಷಕರು ಅವನನ್ನು ಹೊರಹೋಗುವಂತೆ ಕೇಳಿದರು. ಇದ್ದಕ್ಕಿದ್ದಂತೆ ವಿದ್ಯಾರ್ಥಿ ಶ್ರೀ ಬೆಜವಾಡ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth