ಆಟವಾಡೋ ಮಕ್ಕಳೆಲ್ಲ ಬಾರ್ ಗೆ ಹೋಗ್ತಿದ್ದಾರೆ ಸರ್, ಬಾರ್ ಮುಚ್ಚಿಸಿ: ಸಚಿವರಿಗೆ ಮಹಿಳೆ ಮನವಿ

ಚಿಕ್ಕಮಗಳೂರು: ಆಟವಾಡೊ ಮಕ್ಕಳೆಲ್ಲ ಬಾರಿಗೆ ಹೋಗ್ತಿದ್ದಾರೆ ಸರ್. ಆಟವಾಡ್ಕೊಂಡು ಬೆಳೆದು ಬದುಕಿ–ಬಾಳಬೇಕಾದ ಮಕ್ಕಳೆಲ್ಲಾ ಕುಡಿದು ಸಾಯ್ತಿದ್ದಾರೆ. ದಯವಿಟ್ಟು ನಮ್ಮೂರಲ್ಲಿ ಬಾರ್ ಕ್ಲೋಸ್ ಮಾಡಿಸಿ ಎಂದು ಮಹಿಳೆಯೊಬ್ಬಳು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಗೆ ಮನವಿ ಮಾಡಿದ್ದಾರೆ.
ಅವರು ನಿನ್ನೆ ಚಿಕ್ಕಮಗಳೂರು ನಗರದ ಹೊರಹೊಲಯದಲ್ಲಿ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಚಿವರು ವಾಪಸ್ ಹೋಗುವಾಗ ಮಹಿಳೆಯೊಬ್ಬಳು ಮಿನಿಸ್ಟರ್ ಗೆ ತಮ್ಮೂರಿನ ಬಾರ್ ಮುಚ್ಚಿಸುವಂತೆ ಮನವಿ ಮಾಡಿದ್ದಾಳೆ.
ನಮ್ಮೂರಲ್ಲಿ ಕದ್ದು– ಕದ್ದು ಎಣ್ಣೆ ಮಾರುತ್ತಿದ್ದಾರೆ ಸರ್. ಇದರಿಂದ ತುಂಬಾ ಕಷ್ಟವಾಗುತ್ತಿದೆ. ಆಟವಾಡೋ ಮಕ್ಕಳೆಲ್ಲಾ ಕುಡಿದು ಸತ್ತು ಹೋಗ್ತಿದ್ದಾರೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲರಿಗೆ ಕೈಮುಗಿದು ಬೇಡಿಕೊಂಡಿದ್ದಾಳೆ.
ತಾಲೂಕಿನ ಮರ್ಲೆ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವೈನ್ ಶಾಪ್ ನಿಂದ ಆಗುತ್ತಿರೋ ಅನಾಹುತಗಳನ್ನು ಮಹಿಳೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಚಿಕ್ಕ-ಚಿಕ್ಕ ಮಕ್ಕಳೆಲ್ಲಾ ಮದ್ಯ ವ್ಯಸನಿಗಳಾಗಿದ್ದಾರೆ. ದಯಮಾಡಿ ನಮ್ಮ ವೈನ್ ಶಾಪ್ ಕ್ಲೋಸ್ ಮಾಡಿಸಿ ಬೇಡಿಕೊಂಡಿದ್ದಾರೆ. ನಮ್ಮ ಊರಿಗೆ ಬಾರ್ ಅಂಡ್ ರೆಸ್ಟೋರೆಂಟ್ ಬೇಡ ಎಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಕೊಟ್ಟಿದ್ದೆವು. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಆಗಿದೆ ಎಂದು ಸಚಿವರ ಬಳಿ ಗ್ರಾಮಸ್ಥರು ಕೂಡ ಅಳಲು ತೋಡಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: