ನೂರಾರು ಜನರ ಎದುರೇ ನಟ ಆಸಿಫ್ ಅಲಿಗೆ ವೇದಿಕೆಯಲ್ಲೇ ಅವಮಾನಿಸಿದ ಸಂಗೀತ ನಿರ್ದೇಶಕ! - Mahanayaka
2:52 PM Thursday 19 - September 2024

ನೂರಾರು ಜನರ ಎದುರೇ ನಟ ಆಸಿಫ್ ಅಲಿಗೆ ವೇದಿಕೆಯಲ್ಲೇ ಅವಮಾನಿಸಿದ ಸಂಗೀತ ನಿರ್ದೇಶಕ!

asif ali
17/07/2024

ಮಲಯಾಳಂನ ‘ಮನೋರಥಂಗಲ್’ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ  ಮಲಯಾಳಂ ನಟ ಆಸಿಫ್ ಅಲಿ ಅವರಿಗೆ ಮಲಯಾಳಂ ಸಂಗೀತ ಸಂಯೋಜಕ ರಮೇಶ್ ನಾರಾಯಣ್ ಅವಮಾನಿಸಿರುವ ಘಟನೆ ಕೇರಳದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಿನಿಪ್ರಿಯರ ಆಕ್ರೋಶದ ಬೆನ್ನಲ್ಲೇ ರಮೇಶ್ ನಾರಾಯಣ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಪೌರಾಣಿಕ ಬರಹಗಾರ ಎಂ.ಟಿ.ವಾಸುದೇವನ್ ನಾಯರ್ ಅವರು ಬರೆದ ‘ಮನೋರತಂಗಳು’ ಎಂಬ ಒಂಬತ್ತು ಕಥೆಗಳನ್ನು ಆಧರಿಸಿದ ಸಂಕಲನದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ.

ಕಾರ್ಯಕ್ರಮ ಆಯೋಜಕರು ರಮೇಶ್ ನಾರಾಯಣ್ ಅವರಿಗೆ ಸ್ಮರಣಿಕೆ ನೀಡಲು ನಟ ಆಸಿಫ್ ಅಲಿ ಅವರ ಹೆಸರನ್ನು ಸೂಚಿಸಿದ್ದಾರೆ. ಆಸಿಫ್ ಅಲಿ ಸ್ಮರಣಿಕೆ ನೀಡಲು ರಮೇಶ್ ನಾರಾಯಣ್ ಕಡೆಗೆ ಬಂದಿದ್ದಾರೆ. ಈ ವೇಳೆ ಸ್ಮರಣಿಕೆಯನ್ನು ಆಸಿಫ್  ಅಲಿಯ ಮುಖ ಕೂಡ ನೋಡದೇ ಕೈಯಿಂದ ಸೆಳೆದುಕೊಂಡ ರಮೇಶ್ ನಾರಾಯಣ್, ಸಂಕಲನದ ನಿರ್ದೇಶಕರಲ್ಲಿ ಒಬ್ಬರಾದ ಜಯರಾಜ್ ಅವರನ್ನು ಕರೆದು ಸ್ಮರಣಿಕೆಯನ್ನು ನೀಡುವಂತೆ ಹೇಳಿದರು. ನಂತರ ಅವರು ಅಪ್ಪುಗೆ ಮತ್ತು ನಗುವನ್ನು ವಿನಿಮಯ ಮಾಡಿಕೊಂಡರು.


Provided by

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್ ಆಗಿದ್ದು, ಸಿನಿಪ್ರಿಯಕರ ಆಕ್ರೋಶಕ್ಕೆ ಕಾರಣವಾಗಿದೆ. ಒಬ್ಬ ಪ್ರತಿಭಾನ್ವಿತ ನಟನಿಗೆ ಈ ರೀತಿಯಾಗಿ ಅವಮಾನಿಸುವುದು ಎಷ್ಟು ಸರಿ ಎಂದು ಸಾಕಷ್ಟು ಜನರು ಪ್ರಶ್ನಿಸಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ನಟರಿದ್ದರೂ, ಈ ಘಟನೆಯನ್ನು ಯಾರೂ ಖಂಡಿಸಲಿಲ್ಲ ಎನ್ನುವುದು ಇನ್ನೊಂದು ವಿಶೇಷವಾಗಿದೆ.

ಕ್ಷಮೆ ಕೇಳಿದ ರಮೇಶ್ ನಾರಾಯಣ್:

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ರಮೇಶ್ ನಾರಾಯಣ್ ಅವರನ್ನು ನೆಟ್ಟಿಗರು ‘ದುರಾಹಂಕಾರಿ’ ಎಂದು ಕರೆದರು.  ಇದರ ಬೆನ್ನಲ್ಲೇ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ರಮೇಶ್ ನಾರಾಯಣ್,  ಆಸಿಫ್ ಅಲಿ ಅವರನ್ನು ಅವಮಾನಿಸುವ ಉದ್ದೇಶ ನನಗಿರಲಿಲ್ಲ . ನಾನು ಆಸಿಫ್ ಅವರಿಂದ ಸ್ಮರಣಿಕೆಯನ್ನು ಸ್ವೀಕರಿಸಿದ್ದೇನೆ, ಆದರೆ ನಿರ್ದೇಶಕ ಜಯರಾಜ್ ಅವರು ಚಿತ್ರದ ನಿರ್ದೇಶಕರಾಗಿರುವುದರಿಂದ ಅವರೂ ಸೇರಬೇಕೆಂದು ನಾನು ಬಯಸುತ್ತೇನೆ. ಪ್ರಶಸ್ತಿ ನೀಡಲು ಜಯರಾಜ್ ಬರುವ ಹೊತ್ತಿಗೆ ಆಸಿಫ್ ಕಾಣಿಸಲಿಲ್ಲ, ನಾನು ಅವರಿಗೂ ಹಾರೈಸಿದ್ದೆ. ನಟನಾಗಿ ನಾನು ಅವರನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಎಂದು ಜನರ ಆಕ್ರೋಶ ತಣಿಸಲು ಯತ್ನಿಸಿದ್ದಾರೆ.

ಆಸಿಫ್ ಅಲಿಯ ದೊಡ್ಡತನಕ್ಕೆ ನೆಟ್ಟಿಗರು ಫಿದಾ!

ಇನ್ನೂ ತನಗೆ ಸಾಕಷ್ಟು ಜನರ ಮುಂದೆ ಭಾರೀ ಅವಮಾನವಾದರೂ ಆಸಿಫ್ ಅಲಿ ಅದಕ್ಕೆ ಪ್ರತಿಕ್ರಿಯಿಸದೇ, ಮೌನವಾಗಿ ತನ್ನ ಸ್ಥಳದಲ್ಲಿ ಹೋಗಿ ಕುಳಿತಿದ್ದ ಆಸಿಫ್ ಅಲಿಯ ದೊಡ್ಡತನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ