ಯೂಟ್ಯೂಬ್ ಲೈವ್ ನಲ್ಲಿ ಬಂದು ತನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡ ಶಿಕ್ಷಕ | ಏನಿದು ಅಪಾಯಕಾರಿ ಚಾಲೆಂಜ್?
04/03/2021
ನವದೆಹಲಿ: ಇಂಟರ್ ನೆಟ್ ನಲ್ಲಿ ಹಣಗಳಿಸಲು ಶಿಕ್ಷಕನೋರ್ವ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡ ಘಟನೆ ನಡೆದಿದ್ದು, ಆನ್ ಲೈನ್ ನಲ್ಲಿ ಚಾಲೆಂಜ್ ಹಾಕುವ ಮೂಲಕ ಹಣಗಳಿಸುವ ಉದ್ದೇಶದಿಂದ ಶಿಕ್ಷಕ ಈ ಕೆಲಸಕ್ಕೆ ಕೈಹಾಕಿದ್ದಾನೆ.
ಯೂಟ್ಯೂಬ್ ವಿಡಿಯೋ ನೋಡಿ ಈ ರೀತಿಯ ಕೆಲಸಕ್ಕೆ ಶಿಕ್ಷಕ ಕೈ ಹಾಕಿದ್ದಾನೆ. ತನ್ನ ಪೂರ್ಣ ಒಪ್ಪಿಗೆಯೊಂದಿಗೆ ರೂಮ್ ಮೇಟ್ ನಿಂದ ತನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡಿದ್ದಾನೆ. ಯೂಟ್ಯೂಬ್ ವಿಡಿಯೋಗಳಿಂದ ಹೆಚ್ಚು ಹಣಗಳಿಸುವ ಉದ್ದೇಶದಿಂದ ಇಂತಹ ಕೆಲಸ ಮಾಡಿದ್ದಾನೆ ಎಂದು ಹೇಳಲಾಗಿದೆ.
ಸ್ಪಾನಿಷ್ ಮೂಲದ ರಾಪರ್ ಆರೋನ್ ಬೆಲ್ಟ್ರಾನ್ ಎಂಬಾತ ಈ ಹುಚ್ಚು ಚಾಲೆಂಜ್ ಗಳ ಜನಕನಾಗಿದ್ದಾನೆ. ಯೂಟ್ಯೂಬ್ ಯೂಸರ್ಸ್ ಗೆ ಹಣದ ಆಮಿಷವೊಡ್ಡಿ ಅವರಿಂದ ಇಂತಹ ಕೆಲಸ ಮಾಡಿಸುತ್ತಿದ್ದಾನೆ. ಇತ್ತೀಚೆಗಂತೂ ಇದು ವ್ಯಾಪಕವಾಗುತ್ತಿದ್ದು, ಈ ಚಾಲೆಂಜ್ ಸ್ವೀಕರಿಸಿ ಬಹಳಷ್ಟು ಜನರು ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.