ಮಹಾರಾಷ್ಟ್ರದಲ್ಲಿ ನೆಲದ ಆಳಕ್ಕೆ 6 ಕಿ.ಮೀ. ರಂಧ್ರ ಕೊರೆಯಲು ಮುಂದಾದ ವಿಜ್ಞಾನಿಗಳು: ಕಾರಣ ಏನು? - Mahanayaka
7:17 AM Thursday 19 - September 2024

ಮಹಾರಾಷ್ಟ್ರದಲ್ಲಿ ನೆಲದ ಆಳಕ್ಕೆ 6 ಕಿ.ಮೀ. ರಂಧ್ರ ಕೊರೆಯಲು ಮುಂದಾದ ವಿಜ್ಞಾನಿಗಳು: ಕಾರಣ ಏನು?

deep hole in maharashtra
22/07/2024

ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿ ನೆಲದ ಆಳಕ್ಕೆ 6 ಕಿ. ಮೀ. ರಂಧ್ರ ಕೊರೆಯಲು ಸಿದ್ದತೆ ನಡೆಸಿದ್ದಾರೆ. ಯಾಕೆ ನೆಲದ ಆಳಕ್ಕೆ ರಂಧ್ರ ಕೊರೆಯಲು  ತೀರ್ಮಾನಿಸಲಾಯಿತು, ಇದರಿಂದಾಗುವ ಪ್ರಯೋಜನಗಳೇನು ಅನ್ನೋದನ್ನು ತಿಳಿಯೋಣ ಬನ್ನಿ…

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಇರುವ ಕೊಯ್ನಾ ಜಲಾಶಯ ಹಾಗೂ ಅದರ ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ಪದೇ ಪದೇ ಲಘು ಭೂಕಂಪಗಳು ಸಂಭವಿಸುತ್ತಲೇ ಇವೆ. ಹೀಗಾಗಿ ಭೂಕಂಪಗಳ ಮುನ್ಸೂಚನೆಗಳನ್ನು ಪಡೆಯಲು ನೆಲದ ಆಳಕ್ಕೆ 6 ಕಿ. ಮೀ. ವರೆಗೂ ರಂಧ್ರ ಕೊರೆಯಲು ವಿಜ್ಞಾನಿಗಳು ಮುಂದಾಗಿದ್ದಾರೆ.

ಸತಾರಾ ಜಿಲ್ಲೆಯಲ್ಲಿ ಕಳೆದ ಜುಲೈ 17 ರಂದೂ  ಭೂಕಂಪ ಸಂಭವಿಸಿತ್ತು. 1960ರಲ್ಲಿ ಇಲ್ಲಿ ಜಲಾಶಯ ನಿರ್ಮಾಣ ಮಾಡಿದ ನಂತರ ಪದೇ ಪದೇ ಭೂಕಂಪಗಳು ಸಂಭವಿಸುತ್ತಲೇ ಇವೆ. 1967ರಲ್ಲಿ ಇಲ್ಲಿ ಸಂಭವಿಸಿದ 6.3 ತೀವ್ರತೆಯ ಭೂಕಂಪಕ್ಕೆ ನೂರಾರು ಮಂದಿ ಬಲಿಯಾಗಿದ್ದರು ಹೀಗಾಗಿ ಇಂತಹ ಅವಘಡಗಳ ಮುನ್ಸೂಚನೆ ಪಡೆದುಕೊಳ್ಳಲು ಭೂಮಿಯ ಆಳಕ್ಕೆ ಭಾರೀ ರಂಧ್ರ ಕೊರೆಯಲು ತೀರ್ಮಾನಿಸಲಾಗಿದೆಯಂತೆ.


Provided by

1967ರ ಭೂಕಂಪವಾಗಿ  20 ವರ್ಷಗಳ ಬಳಿಕ ಕೊಯ್ನಾ ಜಲಾಶಯದಿಂದ ಕೇವಲ 20 ಕಿ. ಮೀ. ದೂರದಲ್ಲಿ ವರ್ನಾ ನದಿಗೆ ಮತ್ತೊಂದು ಬೃಹತ್ ಜಲಾಶಯ ನಿರ್ಮಿಸಲಾಯ್ತು. ಈ ಜಲಾಶಯ ಕಾರ್ಯಾರಂಭ ಮಾಡಿದ ಬಳಿಕ ಈ ಜಲಾಶಯದ ಬಳಿಯಲ್ಲೂ 1994ರಲ್ಲಿ ಭೂಕಂಪ ಸಂಭವಿಸಿತ್ತು.  ಪದೇ ಪದೇ ಭೂಕಂಪನ ಸಂಭವಿಸುತ್ತಿರುವ ಹಿನ್ನೆಲೆ ನೆಲದಾಳಕ್ಕೆ ರಂಧ್ರ ಕೊರೆದು ಇಲ್ಲಿನ ಭೂಮಿಯ ಸ್ಥಿತಿಗತಿ ಅರಿಯಲು ವಿಜ್ಞಾನಿಗಳು ಮುಂದಾಗಿದ್ದಾರೆ.

ಜಲಾಶಯದಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹ ಆದಾಗ ಜಲಾಶಯದ ನೀರಿನ ಭಾರವನ್ನು ಇಲ್ಲಿನ ಭೂ ಪ್ರದೇಶ ತಡೆದುಕೊಳ್ಳದಿದ್ದರೆ ಭೂ ಫಲಕಗಳು ಅಲುಗುತ್ತವೆ, ಆಗ ಭೂಕಂಪ ಸಂಭವಿಸುತ್ತವೆ. ಕೆಲವೊಮ್ಮೆ ಭೂ ಫಲಕಗಳಲ್ಲಿ ಬಿರುಕು ಕೂಡಾ ಉಂಟಾಗಬಹುದು. ಜಲಾಶಯ ಹಾಗೂ ಅದರ ಅಕ್ಕಪಕ್ಕದ ನೆಲ ದುರ್ಬಲಗೊಂಡು ಪದೇ ಪದೇ ಭೂಕಂಪ ಆಗಬಹುದು ಎನ್ನುವುದು ವಿಜ್ಞಾನಿಗಳ ಆತಂಕವಾಗಿದೆ. ಹೀಗಾಗಿ  6 ಕಿ. ಮೀ. ರಂಧ್ರ ಕೊರೆದು ಭೂಕಂಪದ ಮುನ್ಸೂಚನೆ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು  ಹೇಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ