ಸ್ಪೀಕರ್ ಖಾದರ್ 'ಪ್ರದೀಪ್ ಈಶ್ವರ್'ಗೆ ಕಬ್ಬಿಣ ಕೊಡಲು ಹೇಳಿದ್ದು ಸರಿಯೇ!? - Mahanayaka

ಸ್ಪೀಕರ್ ಖಾದರ್ ‘ಪ್ರದೀಪ್ ಈಶ್ವರ್’ಗೆ ಕಬ್ಬಿಣ ಕೊಡಲು ಹೇಳಿದ್ದು ಸರಿಯೇ!?

u t khadar
22/07/2024

ವಿಧಾನ ಸಭೆಯಲ್ಲಿ ವಿಪಕ್ಷಗಳ ಸದಸ್ಯರೊಂದಿಗಿನ ವಾಗ್ವಾದದ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ  ಸ್ಪೀಕರ್ ಯು.ಟಿ.ಖಾದರ್ ಅವರು ಹೇಳಿರುವ ಮಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗ್ತಿವೆ.

ವಿಪಕ್ಷಗಳ ನಾಯಕರ ವಿರುದ್ಧ ಪ್ರದೀಪ್ ಈಶ್ವರ್ ರೊಚ್ಚಿಗೆದ್ದಿದ್ದ ಸಂದರ್ಭದಲ್ಲಿ ಸ್ಪೀಕರ್ ಯು.ಟಿ ಖಾದರ್, ಪ್ರದೀಪ್ ಈಶ್ವರ್ ಗೆ ಏನಾಗಿದೆ? ಯಾರಾದರೂ ಕಬ್ಬಿಣ ಕೊಡಿ ಎಂದು ಹೇಳಿದ್ದರು. ಸ್ಪೀಕರ್ ವೊಬ್ಬರು ಸದನದ ಸದಸ್ಯರಿಗೆ ಈ ರೀತಿಯಾಗಿ ಗೇಳಿ, ಅವಮಾನಿಸುವ ಹಕ್ಕು ಹೊಂದಿದ್ದಾರೆಯೇ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿವೆ.

ಪ್ರದೀಪ್ ಈಶ್ವರ್‌ ಗೆ ಬಿಜೆಪಿ ನಾಯಕರು “ಬಂಡಲ್ ಪ್ರದೀಪ್ ಈಶ್ವರ್” ಎಂದು ಗೇಲಿ ಮಾಡಿದಾಗ, ಅವರಿಗೆ ಸಮರ್ಥನೆ ಕೊಡಲು ಪ್ರದೀಪ್ ಮುಂದಾದರು. ಆಗ ಸ್ಪೀಕರ್‌ ಯು.ಟಿ.ಖಾದರ್‌, ಪ್ರದೀಪ್‌ ಈಶ್ವರ್‌ಗೆ ಕೂರುವಂತೆ ಸೂಚಿಸಿದರು. ಅತ್ತ ವಿರೋಧ ಪಕ್ಷದವರು ತೀವ್ರವಾಗಿ ಗೇಲಿ ಮಾಡುತ್ತಿದ್ದರಿಂದ ಪ್ರದೀಪ್ ಈಶ್ವರ್ ಅವರಿಗೆ ತಿರುಗೇಟು ನೀಡುತ್ತಿದ್ದರು. ಈ ವೇಳೆ ಸಿಟ್ಟಾದ ಸ್ಪೀಕರ್‌, ‘ಪ್ರದೀಪ್‌ ಈಶ್ವರ್‌ ಏನಾಗಿದೆ ನಿಮಗೆ. ಯಾರಾದರೂ ಅವರ ಕೈಗೆ ಕಬ್ಬಿಣ ಕೊಡಿ’ ಎಂದು ಕಿಡಿಕಾರಿದರು.

ಪ್ರದೀಪ್ ಈಶ್ವರ್ ಅವರಂತೆಯೇ ಇತರ ಸದಸ್ಯರು ಕೂಡ ಸದನದಲ್ಲಿ ಕೂಗಾಡುತ್ತಿದ್ದರು. ಇವರು ಯಾರಿಗೂ ಕಬ್ಬಿಣ ಕೊಡಲು ಹೇಳದ ಸ್ಪೀಕರ್ ಅವರು ಕೇವಲ ಪ್ರದೀಪ್ ಈಶ್ವರ್ ಗೆ ಮಾತ್ರ ಯಾಕೆ ಹೇಳಿದರು. ಆ ಸಂದರ್ಭಕ್ಕೆ ಬಂದ ಮಾತೇ? ಅಥವಾ ಸದನದ ಸದಸ್ಯರನ್ನು ಹೇಗೆ ಬೇಕಾದರೂ ಸ್ಪೀಕರ್ ಅವರು ಕರೆಯಬಹುದೇ? ಸಂವಿಧಾನಿಕ ಪದಗಳನ್ನು ಬಳಕೆ ಮಾಡಿ ಪ್ರದೀಪ್ ಈಶ್ವರ್ ಗೆ ಎಚ್ಚರಿಕೆ ನೀಡಬಹುದಿತ್ತಲ್ಲವೇ ಎನ್ನುವ ಪ್ರಶ್ನೆಗಳು ಸದ್ಯ ಜನರ ಮುಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ