ಬಜೆಟ್ ನಲ್ಲಿ ರಾಜ್ಯಗಳ ಕಡೆಗಣನೆ ಆರೋಪ: ರಾಜ್ಯಸಭೆಯಲ್ಲಿ ಇಂಡಿಯಾ ಕೂಟದಿಂದ ಸಭಾತ್ಯಾಗ - Mahanayaka
7:01 PM Wednesday 15 - January 2025

ಬಜೆಟ್ ನಲ್ಲಿ ರಾಜ್ಯಗಳ ಕಡೆಗಣನೆ ಆರೋಪ: ರಾಜ್ಯಸಭೆಯಲ್ಲಿ ಇಂಡಿಯಾ ಕೂಟದಿಂದ ಸಭಾತ್ಯಾಗ

24/07/2024

ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಕೆಲ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ಇಂಡಿಯಾ ಬಣದ ನಾಯಕರು ಪ್ರತಿಭಟನಾರ್ಥವಾಗಿ ಸಭಾ ತ್ಯಾಗ ನಡೆಸಿದರು. ಕಾಂಗ್ರೆಸ್‌ ಮಂಡಿಸಿರುವ ಬಜೆಟ್‌ಗಳಲ್ಲೂ ಎಲ್ಲ ರಾಜ್ಯಗಳ ಹೆಸರು ಉಲ್ಲೇಖಿಸಿದ್ದಾರೆಯೇ? ತೋರಿಸಲಿ ಎಂದು ಹಣಕಾಸು ಸಚಿವೆ ಕಾಂಗ್ರೆಸ್ ಗೆ ಸವಾಲು ಹಾಕಿದರು.

ಕೇಂದ್ರ ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರ ಪ್ರದೇಶ ಎರಡು ರಾಜ್ಯಗಳಿಗೆ ಮಾತ್ರ ಅನುದಾನ ನೀಡಲಾಗಿದೆ. ಉಳಿದ ರಾಜ್ಯಗಳ ಉಲ್ಲೇಖ ಕಾಣಲೇ ಇಲ್ಲ. ಅದು ‘ಕುರ್ಚಿ ಬಚಾವೊ’ಡಾಕ್ಯುಮೆಂಟ್ ಆಗಿತ್ತು ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಟುಕಿದರು. ಇದು ಸ್ಪಷ್ಟವಾಗಿ ರಾಜ್ಯಗಳಿಗೆ ಎಸಗಿದ ತಾರತಮ್ಯ ಎಂದು ಇಂಡಿಯಾ ಬಣದ ನಾಯಕರು ಸಭಾತ್ಯಾಗ ನಡೆಸಿದರು.


ADS

ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಹಿಂದೆ ಚುನಾವಣೆಗೂ ಮುನ್ನ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲೂ ಎಲ್ಲ ರಾಜ್ಯಗಳ ಉಲ್ಲೇಖ ಇರಲಿಲ್ಲ. ಹಾಗೆಂದು ರಾಜ್ಯಗಳಿಗೆ ಕೇಂದ್ರದ ಯೋಜನೆಗಳು ತಲುಪುವುದಿಲ್ಲ ಎಂದರ್ಥವಲ್ಲ ಎಂದು ಸ್ಪಷ್ಟನೆ ನೀಡಿದರೂ ವಿಪಕ್ಷಗಳು ಕಿವಿಗೊಡಲಿಲ್ಲ.

ಉದಾಹರಣೆಗೆ ಮಹಾರಾಷ್ಟ್ರ ರಾಜ್ಯವನ್ನು ಎರಡೂ ಬಜೆಟ್‌ಗಳಲ್ಲಿ ಉಲ್ಲೇಖಿಸಿಲ್ಲ. ಆದರೂ ಕೆಂದ್ರ ಸಂಪುಟವು ಮಹಾರಾಷ್ಟ್ರದ ದಹನು ಬಳಿ ವಾಧವನ್ ಬಂದರು ಕಾಮಗಾರಿಗೆ ₹76,000 ಕೋಟಿ ಅನುದಾನ ನೀಡಿದೆ ಎಂದು ಹೇಳಿದರು.ಆಂಧ್ರ ಪ್ರದೇಶ, ಬಿಹಾರವಲ್ಲದೆ ಬೇರೆ ರಾಜ್ಯಗಳು ಪ್ರಮುಖ ಯೋಜನೆಗಳನ್ನು ಪಡೆದಿವೆ ಎಂದು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ