ಇಂಧನ ಸಚಿವರ ತವರಿನಲ್ಲಿ ಮೊಬೈಲ್ ಚಾರ್ಜ್ ಗೆ 60 ರೂಪಾಯಿ ದರ: ಫುಲ್ ಗೆ 60 ಹಾಫ್ ಗೆ 40
ಚಿಕ್ಕಮಗಳೂರು: ಇಂಧನ ಸಚಿವರ ತವರಲ್ಲಿ ಮೊಬೈಲ್ ಚಾರ್ಜಿಗೂ ಹಣ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಒಂದು ಮೊಬೈಲ್ ಚಾರ್ಜ್ ಮಾಡೋಕೆ 60 ರೂಪಾಯಿ ಹಣ ಕೊಡಬೇಕು.
ಹೌದು…! ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಮಿಯಾನ ಅಂಗಡಿಯಲ್ಲಿ ಜನರೇಟರ್ ಆನ್ ಮಾಡಿ ಮೊಬೈಲ್ ಚಾರ್ಜಿಂಗ್ ನಡೆಸಲಾಗುತ್ತಿದ್ದು, ಮಳೆಯಿಂದ ಕಳೆದ ಎರಡ್ಮೂರು ದಿನಗಳಿಂದ ಮಲೆನಾಡಿನ ಜನರು ಕತ್ತಲಲ್ಲಿ ಕಳೆಯುತ್ತಿದ್ದಾರೆ. ಹೀಗಾಗಿ ಕರೆಂಟ್ ಇಲ್ಲದೇ ಶಾಮಿಯಾನ ಅಂಗಡಿಯಲ್ಲಿ ಚಾರ್ಜ್ ಮಾಡಿಸಿಕೊಳ್ಳುವ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ.
ಎಷ್ಟೆಷ್ಟು ರೇಟ್:
ಮಲೆನಾಡಿಗರ ದುಸ್ಥಿತಿ ಹೇಗಿದೆ ಅಂದ್ರೆ, ಮೊಬೈಲ್ ಗೆ ಫುಲ್ ಚಾರ್ಜ್ ಮಾಡಬೇಕಾದ್ರೆ 60 ರೂಪಾಯಿ, ಹಾಫ್ ಚಾರ್ಜ್ ಮಾಡಬೇಕಾದ್ರೆ 40 ರೂಪಾಯಿ ನೀಡಬೇಕು. ಶಾಮಿಯಾನ ಅಂಗಡಿವರಾದ್ರೂ ಮೊಬೈಲ್ ಚಾರ್ಜ್ ಗೆ ವ್ಯವಸ್ಥೆ ಮಾಡಿಕೊಡ್ರಲ್ಲ ಅಂತ ಇಲ್ಲಿನ ಜನರು ನೆಮ್ಮದಿ ಪಡುವಂತಹ ಸ್ಥಿತಿ ಇಲ್ಲಿಯದ್ದಾಗಿದೆ.
ಇಂಧನ ಸಚಿವರ ತವರಲ್ಲಿ ಈ ದುಸ್ಥಿತಿ!:
ಇಂಧನ ಸಚಿವರ ತವರಲ್ಲೇ ಜನರು ಕತ್ತಲಲ್ಲಿ ಕುಳಿತುಕೊಳ್ಳುವಂತಾಗಿದೆ. ತುರ್ತಾಗಿ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕಿದೆ. ಸಚಿವರು ಈ ಬಗ್ಗೆ ಗಮನಹರಿಸಿ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97