ಬಿಜೆಪಿಯನ್ನು ಸೋಲಿಸಿದವ್ರ ವಿರುದ್ಧ ಮೋದಿ ಬಜೆಟ್ ಮುಖೇನ ಸೇಡು ತೀರಿಸುತ್ತಿದ್ದಾರೆ: ತಮಿಳುನಾಡು ಮುಖ್ಯಮಂತ್ರಿ ಆರೋಪ - Mahanayaka
5:38 PM Wednesday 15 - January 2025

ಬಿಜೆಪಿಯನ್ನು ಸೋಲಿಸಿದವ್ರ ವಿರುದ್ಧ ಮೋದಿ ಬಜೆಟ್ ಮುಖೇನ ಸೇಡು ತೀರಿಸುತ್ತಿದ್ದಾರೆ: ತಮಿಳುನಾಡು ಮುಖ್ಯಮಂತ್ರಿ ಆರೋಪ

25/07/2024

ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದವರ ವಿರುದ್ಧ ಮೋದಿಯವರು ಬಜೆಟ್ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಆರೋಪಿಸಿದ್ದಾರೆ. ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್ ಹಂಚಿಕೆಗೆ ಟೀಕಿಸಿದ ಸ್ಟಾಲಿನ್, “ಮೋದಿ ತಮ್ಮ ಮಿತ್ರರನ್ನು ಸಮಾಧಾನಪಡಿಸಬಹುದು ಆದರೆ ಅವರು ದೇಶ ಉಳಿಸಲು ಸಾಧ್ಯವಿಲ್ಲ” ಎಂದು ತನ್ನ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ತಮ್ಮ ರಾಜಕೀಯ ಇಷ್ಟ, ಇಷ್ಟವಿಲ್ಲದಿರುವ ವಿಚಾರಗಳನ್ನು ಆಧರಿಸಿ ಆಡಳಿತವನ್ನು ಮುಂದುವರಿಸಿದರೆ ನೀವು ರಾಜಕೀಯವಾಗಿ ಮೂಲೆಗುಂಪಾಗುತ್ತೀರಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆ ನೀಡಿದ್ದಾರೆ.
ಬಜೆಟ್‌ನಲ್ಲಿ ಕೇಂದ್ರವು ಇತರ ರಾಜ್ಯಗಳ ವಿರುದ್ಧ ತಾರತಮ್ಯ ಮಾಡಿದೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ಬೆನ್ನಲ್ಲೇ ಸ್ಟಾಲಿನ್ ಟ್ವೀಟ್ ಮಾಡಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ADS

“ನೀವು ಹೇಳಿದ್ದೀರಿ, ಚುನಾವಣೆ ಮುಗಿದಿದೆ, ಈಗ ನಾವು ದೇಶದ ಬಗ್ಗೆ ಯೋಚಿಸಬೇಕು. ಆದರೆ, ನಿನ್ನೆಯ ಬಜೆಟ್ 2024 ನಿಮ್ಮ ಆಡಳಿತವನ್ನು ಮಾತ್ರ ಉಳಿಸುತ್ತದೆ, ಭಾರತವನ್ನಲ್ಲ” ಎಂದು ಸ್ಟಾಲಿನ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.

“ರಾಜಕೀಯ ಪಕ್ಷಪಾತದ ಆಧಾರದ ಮೇಲೆ ಮೋದಿ ಆಡಳಿತ ಮುಂದುವರಿಸಿದರೆ, ಅವರು ಪ್ರತ್ಯೇಕಗೊಳ್ಳುವ ಅಪಾಯವಿದೆ” ಎಂದು ಹೇಳಿರುವ ಸ್ಟಾಲಿನ್ #BJPBetraysTamilnadu ಎಂಬ ಹ್ಯಾಷ್‌ಟ್ಯಾಗ್ ಅನ್ನು ಹಾಕಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ