ಐಎಎಸ್ ಅಭ್ಯರ್ಥಿಗಳನ್ನು ಪರೀಕ್ಷೆ ಮಾಡ್ತಿದ್ದ ವಿಕಾಸ್ ದಿವ್ಯಕೃತಿಯವ್ರ ದೃಷ್ಟಿ ಐಎಎಸ್ ಕೋಚಿಂಗ್ ಸೆಂಟರ್ ಗೆ ಬೀಗಮುದ್ರೆ..?!
ದೆಹಲಿಯ ಹಳೆಯ ರಾಜೇಂದ್ರ ನಗರ ಪ್ರದೇಶದ ರಾವ್ ಐಎಎಸ್ ಅಕಾಡೆಮಿಯಲ್ಲಿ ಮೂವರು ಯುಪಿಎಸ್ಸಿ ಆಕಾಂಕ್ಷಿಗಳ ಸಾವಿಗೆ ಕಾರಣವಾದ ದುರಂತ ಘಟನೆಯ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡು ಮುಖರ್ಜಿ ನಗರದ ನೆಹರೂ ವಿಹಾರ್ ನಲ್ಲಿರುವ ಮಾಲ್ ನ ನೆಲಮಾಳಿಗೆಯಲ್ಲಿರುವ ದೃಷ್ಟಿ ಕೋಚಿಂಗ್ ಸೆಂಟರ್ ಗೆ ಬೀಗಮುದ್ರೆ ಹಾಕಿದ್ದಾರೆ.
ಜನಪ್ರಿಯ ಯುಪಿಎಸ್ಸಿ ಶಿಕ್ಷಕ ವಿಕಾಸ್ ದಿವ್ಯಕೀರ್ತಿ ‘ದೃಷ್ಟಿ ಐಎಎಸ್’ ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ನೆಲಮಾಳಿಗೆಯಲ್ಲಿ 300 ಮಂದಿ ವಿದ್ಯಾರ್ಥಿಗಳು ನಡೆಸುತ್ತಿರುವ ಈ ಕೋಚಿಂಗ್ ಸೆಂಟರ್ ಅನ್ನು ಎಂಸಿಡಿ ಸೋಮವಾರ ಮುಚ್ಚಿದೆ. ದೆಹಲಿಯ ಕೋಚಿಂಗ್ ಇನ್ಸ್ ಟಿಟ್ಯೂಟ್ ನ ನೆಲಮಾಳಿಗೆಯಲ್ಲಿ ಮೂವರು ಯುಪಿಎಸ್ಸಿ ವಿದ್ಯಾರ್ಥಿಗಳು ಸಾವನ್ನಪ್ಪಿದ ನಂತರ, ವಿಕಾಸ್ ದಿವ್ಯಕೀರ್ತಿ ಅವರ ಮೌನಕ್ಕೆ ಇತರ ವಿದ್ಯಾರ್ಥಿಗಳು ತೀವ್ರ ಕೋಪಗೊಂಡಿದ್ದಾರೆ.
ಮಾಲ್‌ನ ನೆಲಮಾಳಿಗೆಯಲ್ಲಿರುವ ಕೋಚಿಂಗ್ ಸೆಂಟರ್ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ವಿದ್ಯಾರ್ಥಿಗಳ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ. ದೃಷ್ಟಿ ಕೋಚಿಂಗ್ ಸೆಂಟರ್ ನಲ್ಲಿ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳು ಮಾಲ್ ಬಳಿಯ ದೊಡ್ಡ ಚರಂಡಿಯು ಸಮರ್ಪಕವಾಗಿಲ್ಲ ಎಂದು ಆರೋಪಿಸಿದ್ದಾರೆ. ಕೋಚಿಂಗ್ ಸೆಂಟರ್ ನೆಲಮಾಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಅಲ್ಲಿ ಐದು ತರಗತಿಗಳು ಏಕಕಾಲದಲ್ಲಿ ನಡೆಯುತ್ತಿದ್ದವು.
ಇನ್ನು ಈ ಘಟನೆಯ ನಂತರ ಆಡಳಿತವು ನೆಹರೂ ವಿಹಾರ್ ಸೇರಿದಂತೆ ದೆಹಲಿಯ 13 ಕ್ಕೂ ಹೆಚ್ಚು ಕೋಚಿಂಗ್ ಕೇಂದ್ರಗಳಿಗೆ ಬೀಗಮುದ್ರೆ ಹಾಕಿದೆ. ಆವರಣದ ಪರಿಶೀಲನೆಯ ವೇಳೆ ತರಗತಿ ಕೊಠಡಿಗಳ ಪಕ್ಕದಲ್ಲಿರುವ ವಿದ್ಯುತ್ ಸ್ಥಾವರ, ಡಜನ್‌ಗಟ್ಟಲೆ ವಿದ್ಯುತ್ ಮೀಟರ್ ಗಳು ಮತ್ತು ತಂತಿಗಳನ್ನು ಹೊಂದಿರುವ ಆಘಾತಕಾರಿ ಸುರಕ್ಷತಾ ಅಪಾಯಗಳನ್ನು ಬಹಿರಂಗಪಡಿಸಿದೆ. ಹೆಚ್ಚುವರಿಯಾಗಿ ಒಳಚರಂಡಿ ವ್ಯವಸ್ಥೆಯು ತರಗತಿ ಕೊಠಡಿಗಳಿಗೆ ಹತ್ತಿರದಲ್ಲಿದೆ ಎಂದು ಕಂಡುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth