ಭಾರೀ ಅನಾಹುತ: ಕೇರಳದಲ್ಲಿ ಭಾರೀ ಭೂಕುಸಿತಕ್ಕೆ 19 ಮಂದಿಯ ದಾರುಣ ಸಾವು: ನೂರಾರು ಮಂದಿ ನಾಪತ್ತೆ - Mahanayaka

ಭಾರೀ ಅನಾಹುತ: ಕೇರಳದಲ್ಲಿ ಭಾರೀ ಭೂಕುಸಿತಕ್ಕೆ 19 ಮಂದಿಯ ದಾರುಣ ಸಾವು: ನೂರಾರು ಮಂದಿ ನಾಪತ್ತೆ

wayanad landslides
30/07/2024

ವಯನಾಡ್: ಶಿರೂರು ಬಳಿಕ ಕೇರಳದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಈ ಭೂಕುಸಿತದಲ್ಲಿ 19 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ವಯನಾಡ್ ನ ವಯನಾಡಿನ ಮೆಪ್ಪಾಡಿ ಮುಂಡಕೈ ಮತ್ತು ಚುರಲ್‌ಮಲಾದಲ್ಲಿ ನಡೆದಿದೆ.

ಭಾರೀ ಭೂಕುಸಿತದಲ್ಲಿ 19 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ.  ಮೃತರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಅನೇಕ ಜನರು ಕಾಣೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಮುಂಡಕೈ ಒಂದರಲ್ಲೇ ಸುಮಾರು 100 ಕುಟುಂಬಗಳು ದುರಂತಕ್ಕೆ ಸಿಲುಕಿವೆ. ಸಿಕ್ಕಿಬಿದ್ದವರಲ್ಲಿ ವಿದೇಶಿಗರೂ ಇರುವ ಶಂಕೆ ಇದೆ ಎಂದು ಶಾಸಕ ಟಿ.ಸಿದ್ದೀಕ್ ತಿಳಿಸಿದ್ದಾರೆ.

ಮಣ್ಣಿನಡಿಯಲ್ಲಿ ಸಿಲುಕಿದವರ ರಕ್ಷಣೆಗೆ ಸೇನೆ ಆಗಮಿಸಲಿದೆ ಎಂದು  ಹೇಳಲಾಗಿದೆ. ಕಣ್ಣೂರು ಕಂಟೋನ್ಮೆಂಟ್‌ ನಿಂದ ಸೇನೆಯ ಎರಡು ತಂಡಗಳು ವಯನಾಡಿಗೆ ತೆರಳಿವೆ. ಸೂಲೂರಿನಿಂದ ವಾಯುಸೇನೆಯ ಎರಡು ಹೆಲಿಕಾಪ್ಟರ್‌ ಗಳು ಆಗಮಿಸಲಿವೆ.

ಮುಂಡಕೈ ಅಟ್ಟಮಲ ಚುರಲ್ಮಲ ಭಾಗಗಳಲ್ಲಿ ಅನಾಹುತವಾಗಿದೆ. ಮೃತರಲ್ಲಿ 3 ಮಕ್ಕಳು ಸೇರಿದ್ದಾರೆ. ಹ್ಯಾರಿಸನ್ಸ್‌ ನಲ್ಲಿ 100 ತೋಟ ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಕಂಪನಿಯ ಸಿಇಒ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ