ಪುನೀತ್ ಕೆರೆಹಳ್ಳಿಗೆ ಬಟ್ಟೆಬಿಚ್ಚಿ ಕೊಟ್ರಂತೆ ಪೊಲೀಸ್ರು..!: ಪ್ರತಿಭಟನೆಗೆ ಪ್ರತಾಪ್ ಸಿಂಹ ಎಂಟ್ರಿ! - Mahanayaka

ಪುನೀತ್ ಕೆರೆಹಳ್ಳಿಗೆ ಬಟ್ಟೆಬಿಚ್ಚಿ ಕೊಟ್ರಂತೆ ಪೊಲೀಸ್ರು..!: ಪ್ರತಿಭಟನೆಗೆ ಪ್ರತಾಪ್ ಸಿಂಹ ಎಂಟ್ರಿ!

puneeth prathap
31/07/2024

ಬೆಂಗಳೂರು: ಈವರೆಗೆ ಧರ್ಮರಕ್ಷಣೆಯ ಹೋರಾಟ ಮಾಡುತ್ತಿದ್ದ ಪುನೀತ್ ಕೆರೆಹಳ್ಳಿ ತಂಡ ಇದೀಗ ಮಾಂಸ ರಕ್ಷಣೆ ವಿಚಾರದಲ್ಲಿ ಪೊಲೀಸರ ಜೊತೆಗೆ ಸಮರ ಸಾರಿದೆ. ರಾಜಸ್ಥಾನದಿಂದ ತಂದ ಟನ್ ಗಟ್ಟಲೆ ಕುರಿ ಮಾಂಸವನ್ನು ನಾಯಿ ಮಾಂಸ ಎಂದು ಅಪಪ್ರಚಾರ ನಡೆಸಿ, ರಾದ್ಧಾಂತ ಸೃಷ್ಟಿಸಿದ್ದ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಪುನೀತ್ ನನ್ನು ಬಿಡುಗಡೆ ಮಾಡಿದ್ದರು.

ಪೊಲೀಸರು ವಶಕ್ಕೆ ಪಡೆದ ಬಳಿಕ ಪುನೀತ್ ಕೆರೆಹಳ್ಳಿಗೆ ಬಟ್ಟೆ ಬಿಚ್ಚಿ ಹೊಡೆದಿದ್ದಾರೆ ಎಂದು ಆರೋಪಿಸಿ ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಪುನೀತ್ ಕೆರೆಹಳ್ಳಿ ಜೊತೆ ಸೇರಿ ಪ್ರತಿಭಟನೆ ನಡೆಸಿದ್ದು, ಎಸಿಪಿ ಚಂದನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಬೆತ್ತಲೆಗೊಳಿಸಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಎಸಿಪಿ ಅವರನ್ನು ವಿಚಾರಣೆ ಮಾಡಬೇಕು ಅಂತ ಪ್ರತಾಪ್ ಸಿಂಹ ಒತ್ತಾಯಿಸಿದರು.

ಬಸವೇಶ್ವರ ನಗರ ಪೊಲೀಸರಿಗೆ ದೂರು ನೀಡಿದ ವೇಳೆ, ಇದು ಎಸಿಪಿಯಿಂದ ಆಗಿರೋದ್ರಿಂದ ಹಿರಿಯ ಅಧಿಕಾರಿಗಳಿಗೆ ದೂರು ಕೊಡುವಂತೆ ಸೂಚಿದ ಕಾರಣ, ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದೇವೆ. ದೂರಿನ ಪ್ರತಿ ಸ್ವೀಕಾರ ಮಾಡಲಾಗಿದೆ ಎಂದು ಪ್ರತಾಪ್ ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ