ಇನ್ನಷ್ಟು ಸಚಿವರಿಗೆ ಸಿಡಿ ಭೀತಿ! | ಮೀಡಿಯಾದವರು ಇರೋಬರೋದೆಲ್ಲ ತೋರಿಸ್ತಾರೆ ಎಂದ ಸಚಿವ!
ಬೆಂಗಳೂರು: ಮೈತ್ರಿ ಸರ್ಕಾರ ಕೆಡವಿ ಸರ್ಕಾರ ರಚಿಸಿದ ಬಳಿಕ ಇದೀಗ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ಇತರ ಸಚಿವರಿಗೂ ಇದೀಗ ಸಿಡಿ ಅಥವಾ ಮಾನಹಾನಿಕರ ಸುದ್ದಿಯ ಭೀತಿ ಸೃಷ್ಟಿಯಾಗಿದೆ.
ಈಗಾಗಲೇ 6 ಸಚಿವರುಗಳು ತಮ್ಮ ವಿರುದ್ಧ ಮಾನಹಾನಿಕಾರಕ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಉಳಿದ ಸಚಿವರೂ ಕೋರ್ಟ್ಗೆ ಅರ್ಜಿ ಹಾಕುತ್ತಾರೆ. ಇಂದು ಅಥವಾ ನಾಡಿದ್ದು(ಸೋಮವಾರ) ಉಳಿದ ಸಚಿವರು ಅರ್ಜಿ ಹಾಕಲಿದ್ದಾರೆ ಸಚಿವ ಸೋಮಶೇಖರ್ ಎಂದು ಅವರು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಬೆನ್ನಲ್ಲೇ ಈ ಸಿಡಿ ವಿರುದ್ಧ ಬಿಜೆಪಿ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದರು. ಯಾರೊಬ್ಬರು ಸಚಿವರು ಕೂಡ ರಮೇಶ್ ಜಾರಕಿಹೊಳಿ ವಿರುದ್ಧ ಮಾತನಾಡಿಲ್ಲ. ಇದೀಗ ಹೊಸ ಬೆಳವಣಿಯ ಪ್ರಕಾರ 6 ಸಚಿವರು ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಸಿಡಿ ಭೀತಿ ಇರುವ ಇನ್ನಷ್ಟು ಸಚಿವರು ಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ.
ಕೆಲ ಮಾಧ್ಯಮಗಳಲ್ಲಿ ಇರೋಬರೋದೆಲ್ಲ ಹಾಕಿ ಅವಮಾನ ಮಾಡ್ತಾರೆ. ಒಳ್ಳೇದು-ಕೆಟ್ಟದು ಅಂತ ನೋಡಲ್ಲ. ಅದಕ್ಕಾಗಿ ನಾವು ಕೋರ್ಟ್ಗೆ ಮೊರೆ ಹೋಗಿದ್ದೀವಿ ಎಂದು ಸೋಮಶೇಖರ್ ಹೇಳಿದ್ದಾರೆ.