ಬೈಕ್ ಸವಾರರನ್ನು ಕಾಪಾಡಲು ರಸ್ತೆಯ ಗುಂಡಿಯಲ್ಲಿ ಬಾಳೆಗಿಡ ನೆಟ್ಟ ಸಾರ್ವಜನಿಕರು
ಚಿಕ್ಕಮಗಳೂರು: ಮಳೆಯಿಂದ ಗುಂಡಿ ರಸ್ತೆಯಲ್ಲಿ ಬಿದ್ದು ಯಾರೂ ಅಪಾಯಕ್ಕೀಡಾಗುವುದು ಬೇಡ ಎಂದು ಅಪಘಾತ ತಪ್ಪಿಸಲು ಮಲೆನಾಡಿಗರ ವಿನೂತನ ಪ್ರಯತ್ನ ಮಾಡಿದ್ದಾರೆ.
ಶೃಂಗೇರಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ರಸ್ತೆ ಮಧ್ಯೆ ಗಿಡನೆಟ್ಟು ಅಪಘಾತ ತಪ್ಪಿಸುವ ಪ್ರಯತ್ನ ನಡೆದಿದೆ. ಶಾರದಾಂಭೆ ದೇಗುಲದ ಮೇನ್ ರೋಡ್ ಭಾರತೀ ತೀರ್ಥ ಶ್ರೀಗಳ ಹೆಸರಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಬೈಕ್ ಸವಾರರು ಬೀಳಬಾರದೆಂದು ರಸ್ತೆ ಮಧ್ಯೆಯ ಗುಂಡಿಗೆ ಸ್ಥಳೀಯರು ಗಿಡ ನೆಟ್ಟಿದ್ದಾರೆ. ಈ ಗುಂಡಿಗೆ ಬಿದ್ದು ಹಲವು ಬೈಕ್ ಸವಾರರು ಅಪಾಯಕಾರಿ ಸನ್ನಿವೇಶ ಎದುರಿಸಿದ್ದರು. ಹೀಗಾಗಿ ಗಿಡ ನೆಟ್ಟು ಬೈಕ್ ಸವಾರರು ಅಪಘಾತಕ್ಕೀಡಾಗದಂತೆ ಸ್ಥಳೀಯರು ಎಚ್ಚರಿಕೆ ವಹಿಸಿದ್ದಾರೆ.
ಭಾರೀ ಗಾಳಿ–ಮಳೆ–ಚಳಿ ಮಧ್ಯೆ ಬೈಕಿನಲ್ಲಿ ಬಿದ್ದು ಗಾಯವಾದ್ರೆ ಸವಾರರು ತಿಂಗಳುಗಟ್ಟಲೇ ನರಳಬೇಕು ಅಂತಹ ಸನ್ನಿವೇಶ ಯಾರಿಗೂ ಸೃಷ್ಟಿಯಾಗದಿರಲಿ ಎನ್ನುವುದು ಸ್ಥಳೀಯರ ಪ್ರಯತ್ನವಾಗಿದೆ. ಜೊತೆಗೆ ರಸ್ತೆಯಲ್ಲಿ ಗುಂಡಿ ಬಿದ್ದರೂ ತಿರುಗಿಯೂ ನೋಡದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಇದಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth