‘ನನ್ನ ಮಗಳ ಮದ್ವೆಗೆ ತಯಾರಿ ನಡೆಸಿದ್ದೆ.. ಆದ್ರೆ ಎಲ್ಲವೂ ಕೊಚ್ಚಿ ಹೋಯ್ತು’: ರಾಹುಲ್ ಗಾಂಧಿಯನ್ನು ತಬ್ಬಿ ಕಣ್ಣೀರಿಟ್ಟ ಮಹಿಳೆ
ಭೂಕುಸಿತದಲ್ಲಿ ನನ್ನ ಮನೆ ಕೊಚ್ಚಿ ಹೋಗಿದೆ, ಏಕೈಕ ಮಗಳ ಮದುವೆ ನಡೆಯುವುದಕ್ಕೆ ತಯಾರಿ ನಡೆಸಿದ್ದೆ, ನನ್ನ ಕೈಬಿಡಬೇಡಿ ಎಂದು ನಿರಾಶ್ರಿತ ಶಿಬಿರಕ್ಕೆ ಭೇಟಿ ಕೊಟ್ಟ ರಾಹುಲ್ ಗಾಂಧಿಯಲ್ಲಿ ನೆಬಿಸಾ ಎಂಬ ಮಹಿಳೆ ಮಾಡಿಕೊಂಡ ಮನವಿ ಎಲ್ಲರ ಕಣ್ಣನ್ನೂ ಮಂಜಾಗಿಸಿದೆ.
ಅವರ ಮಾತನ್ನು ಆಲಿಸಿದ ರಾಹುಲ್ ಗಾಂಧಿ ಅವರು, “ಭಯಪಡಬೇಡಿ, ನಿಮಗೆ ಮನೆ ನಾನು ನಿರ್ಮಿಸಿ ಕೊಡುತ್ತೇನೆ ಮತ್ತು ನಿಮ್ಮ ಮಗಳ ಮದುವೆಯನ್ನು ನೆರವೇರಿಸಿ ಕೊಡುತ್ತೇನೆ” ಎಂದು ಭರವಸೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಭೂಕುಸಿತದಿಂದ ನಿರ್ವಸಿತರಾದವರು ನಿರಾಶಿತ ಶಿಬಿರದಲ್ಲಿ ತಂಗಿದ್ದರು. ಅಲ್ಲಿಗೆ ರಾಹುಲ್ ಗಾಂಧಿ ಭೇಟಿ ನೀಡಿದಾಗ ಈ ನಬಿಸ ಮತ್ತು ಇನ್ನಿತರ ಅನೇಕ ಮಂದಿ ತಮ್ಮ ಸಂಕಟವನ್ನ ತೋಡಿಕೊಂಡರು. ಇವರೆಲ್ಲರ ಅಹವಾಲನ್ನು ರಾಹುಲ್ ಗಾಂಧಿ ತಾಳ್ಮೆಯಿಂದ ಆಲಿಸಿದರು. ಮತ್ತು ಅವರ ಜೊತೆಗಿದ್ದ ತಂಡ ನೆರವಿನ ಭರವಸೆಯನ್ನೂ ನೀಡಿತು
ನವಂಬರ್‌ನಲ್ಲಿ ನನ್ನ ಮಗಳ ಮದುವೆ ಫಿಕ್ಸ್ ಆಗಿದೆ ಎಂದು ನೆಬಿಸಾ ಹೇಳಿದಾಗ ಹೆದರಬೇಡಿ ಎಂದು ರಾಹುಲ್ ಗಾಂಧಿ ಭರವಸೆ ತುಂಬಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth