ಟಿಕ್ ಟಾಕ್ ನಲ್ಲಿ ಅಶ್ಲೀಲ ವಿಡಿಯೋ ಬಿಟ್ಟ ಹೆಂಡತಿಗೆ ನಾಲ್ಕೇಟು ಕೊಟ್ಟ | ಆ ಮೇಲೆ ನಡೆದ್ದದ್ದೇನು ಗೊತ್ತಾ?
06/03/2021
ರಾಜಸ್ತಾನ: ಪತ್ನಿಯು ಟಿಕ್ ಟಾಕ್ ನಲ್ಲಿ ತನ್ನ 300ಕ್ಕೂ ಅಧಿಕ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಇದರಿಂದ ಸಿಟ್ಟಿಗೆದ್ದ ಪತಿ ಆಕೆಗೆ ಮನ ಬಂದಂತೆ ಥಳಿಸಿದ್ದಾನೆ. ಆದರೆ ಇದೀಗ ಪತಿ ಸಂಕಷ್ಟಕ್ಕೀಡಾಗಿದ್ದಾನೆ.
ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ಆಕ್ರೋಶಗೊಂಡ ಪತ್ನಿ ಪತಿಯ ವಿರುದ್ಧ ದೂರು ನೀಡಿದ್ದರು, ಇದೀಗ ಪತಿ ಕಂಬಿ ಎಣಿಸುವ ಭೀತಿಯಲ್ಲಿದ್ದಾನೆ. ಈತ ತನ್ನ ನಿರೀಕ್ಷಣಾ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಗೆ ಹೋದರೂ ಆತನಿಗೆ ಜಾಮೀನು ದೊರೆತಿಲ್ಲ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಹ್ಮಣ್ಯನ್ ಅವರಿದ್ದ ಪೀಠ ಪತಿಗೆ ಜಾಮೀನು ನಿರಾಕರಿಸಿದೆ.
ಪತ್ನಿಯ ವಿರುದ್ಧ ಅಸಮಾಧಾನವಿದ್ದರೆ ವಿಚ್ಛೇದನ ಪಡೆಯಬಹುದು. ಅದನ್ನು ಬಿಟ್ಟು ಕ್ರೌರ್ಯ ಮೆರೆಯುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದ್ದು, ಜಾಮೀನು ನಿರಾಕರಿಸಿದೆ. ಇದೀಗ ಪತ್ನಿಗೆ ಬುದ್ಧಿ ಕಲಿಸಲು ಹೋದ ಪತಿ ತಾನು ನೆಮ್ಮದಿ ಕಳೆದುಕೊಂಡಿದ್ದಾನೆ.