ಹಳೆಯ ಫೋನ್ ನ್ನು ಹೊಸದರಂತೆ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
ಹೊಸ ಮೊಬೈಲ್ ಖರೀದಿ ಮಾಡಿ ಎರಡು ವರ್ಷದೊಳಗೆ ಮೊಬೈಲ್ ಹಳೆಯದಂತೆ ಕಾಣಲು ಆರಂಭಿಸುತ್ತದೆ. ಆಗ ಸಾಕಷ್ಟು ಜನರು ಇನ್ನೊಂದು ಮೊಬೈಲ್ ಖರೀದಿಸಬೇಕು ಅಂತ ಯೋಚಿಸುತ್ತಾರೆ. ಆದರೆ ಇದರಿಂದ ಅನಗತ್ಯವಾಗಿ ಹಣ ವ್ಯರ್ಥವಾಗುತ್ತದೆ. ಇದರ ಬದಲು ಹಳೆಯ ಫೋನ್ ನನ್ನು ಜಾಗ್ರತೆಯಿಂದ ಬಳಸಿ, ಹೊಸದರಂತೆ ಹಲವು ವರ್ಷಗಳ ಕಾಲ ಬಳಸಬಹುದು.
ಡಿಸ್ ಪ್ಲೇಯನ್ನು ಸ್ವಚ್ಛಗೊಳಿಸಿ:
* ಸ್ಮಾರ್ಟ್ಫೋನ್(Smartphone) ಡಿಸ್ ಪ್ಲೇಯನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಮುಖ್ಯ. ಇದಕ್ಕಾಗಿ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿದರೆ ಉತ್ತಮ.
* ಯಾವುದೇ ದ್ರವವನ್ನು ನೇರವಾಗಿ ಡಿಸ್ಪ್ಲೇಯ ಮೇಲೆ ಸುರಿಯಬೇಡಿ. ಇದರಿಂದ ನಿಮ್ಮ ಡಿಸ್ ಪ್ಲೇ ಹಾಳಾಗಬಹುದು.
* ಡಿಸ್ ಪ್ಲೇಯ ಮೇಲೆ ಸ್ಕ್ರಾಚ್ ಅನ್ನು ತಪ್ಪಿಸಲು ಪ್ಲಾಸ್ಟಿಕ್ ಅಥವಾ ಗಾಜಿನ ಪ್ರೊಟೆಕ್ಷನ್(Glass protection) ಬಳಸಿ.
ಫೋನ್ ಬಾಡಿಯನ್ನು ಸ್ವಚ್ಛಗೊಳಿಸಿ:
* ಫೋನ್ ನ ಬಾಡಿಯನ್ನು ಸ್ವಚ್ಛಗೊಳಿಸಲು, ಸೋಪ್ ನೀರಿನಲ್ಲಿ ಅದ್ದಿದ ಮೃದುವಾದ ಬಟ್ಟೆಯನ್ನು ಬಳಸಿ.
* ಫೋನ್ ಅನ್ನು ನೀರಿನಲ್ಲಿ ಮುಳುಗಿಸಬೇಡಿ.
* ಚಾರ್ಜಿಂಗ್ ಪೋರ್ಟ್ ಮತ್ತು ಸ್ಪೀಕರ್ ಅನ್ನು ಸ್ವಚ್ಛಗೊಳಿಸಲು ಹತ್ತಿ ಬಟ್ಟೆಯನ್ನು ಬಳಸಿದರೆ ಉತ್ತಮ.
ಮೊಬೈಲ್ ಸ್ಪೀಡ್ ಆಗಿ ಕಾರ್ಯ ನಿರ್ವಹಿಸಲು ಈ ಸಲಹೆ:
ಸಾಫ್ಟ್‌ವೇರ್ ಅಪ್ ಡೇಟ್(Software update): ಫೋನ್ ಸ್ಪೀಡ್ ಆಗಿ ಕಾರ್ಯನಿರ್ವಹಿಸಲು ಮೊದಲನೆಯದಾಗಿ ಇತ್ತೀಚಿನ ಸಾಫ್ಟ್ ವೇರ್ ಆವೃತ್ತಿಗೆ ನವೀಕರಿಸಿ.
ಅನಗತ್ಯ ಅಪ್ಲಿಕೇಶನ್ ಗಳನ್ನು ಅಳಿಸಿ: ನೀವು ಬಳಸದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ.
ಸಂಗ್ರಹ ಮತ್ತು ಡೇಟಾ(Storage and data): ಅಪ್ಲಿಕೇಶನ್ ಸ್ಟೋರೇಜ್ ಮತ್ತು ಡೇಟಾವನ್ನು ಕ್ಲೀಯರ್ ಮಾಡುವ ಮೂಲಕ ಫೋನ್ ಮೆಮೊರಿಯನ್ನು ಹೆಚ್ಚಿಸಬಹುದು.
ಬ್ಯಾಕ್ ಗ್ರೌಂಡ್ ಅಪ್ಲಿಕೇಶನ್(Background application): ಬ್ಯಾಕ್ ಗ್ರೌಂಡ್ ನಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್ ಗಳನ್ನು ಕ್ಲೋಸ್ ಮಾಡುವ ಮೂಲಕ ಬ್ಯಾಟರಿ ಅವಧಿಯನ್ನು ವಿಸ್ತರಿಸಬಹುದು.
ಫೋನ್ ರೀಬೂಟ್(Phone Reboot) ಮಾಡಿ: ನಿಯಮಿತವಾಗಿ ಫೋನ್ ಅನ್ನು ರೀಬೂಟ್ ಮಾಡುವುದರಿಂದ ಸಣ್ಣ–ಪುಣ್ಣ ಸಮಸ್ಯೆಗಳು ಕಾಣಿಸುವುದಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth