‘ಕೇರಳ ನನಗೆ ತುಂಬಾ ಪ್ರೀತಿ ನೀಡಿದೆ’: ನಾನು ವಯನಾಡಿಗೆ ಬರ್ತೀನಿ ಎಂದ ವೈದ್ಯ ಕಫೀಲ್ ಖಾನ್
“ಕೇರಳ ನನಗೆ ಧಾರಾಳ ಪ್ರೀತಿಯನ್ನು ಕೊಟ್ಟಿದೆ. ಅದರಲ್ಲಿ ಸ್ವಲ್ಪವಾದರೂ ಮರಳಿಸುವುದಕ್ಕಾಗಿ ನಾನು ವಯನಾಡಿಗೆ ಬರುತ್ತೇನೆ ಎಂದು ವೈದ್ಯ ಕಫೀಲ್ ಖಾನ್ ಹೇಳಿದ್ದಾರೆ. ಮಕ್ಕಳ ವೈದ್ಯರಾಗಿದ್ದ ಕಫೀಲ್ ಖಾನ್ ಅವರನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ನಕಲಿ ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ತಳ್ಳಿತ್ತು. ಆಗ ಕೇರಳದಲ್ಲಿ ಅವರ ಪರವಾಗಿ ಸಾಕಷ್ಟು ರ್ಯಾಲಿಗಳು ನಡೆದಿತ್ತು. ಹಾಗೆಯೇ ಅವರು ಬಿಡುಗಡೆಗೊಂಡಾಗ ಕೇರಳದಲ್ಲಿ ಅವರನ್ನು ಅಭಿನಂದಿಸುವ ಹಲವು ರ್ಯಾಲಿಗಳು ನಡೆದಿದ್ದವು.
ಮಕ್ಕಳ ವೈದ್ಯನಾಗಿ ನನ್ನಿಂದಾಗುವ ನೆರವು ನೀಡುವುದಕ್ಕಾಗಿ ಕೂಡಲೇ ನಾನು ಕೇರಳಕ್ಕೆ ಪ್ರಯಾಣಿಸುವೆ ಎಂದವರು ಹೇಳಿದ್ದಾರೆ.
2017ರಲ್ಲಿ ಬಿ ಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ 60 ಕ್ಕಿಂತಲೂ ಅಧಿಕ ಮಕ್ಕಳು ಮೃತ ಪಟ್ಟಿರುವುದಕ್ಕೆ ಆಕ್ಸಿಜನ್ ನ ಕೊರತೆ ಕಾರಣವಾಗಿದೆ ಎಂದು ಅವರು ಬಹಿರಂಗ ಪಡಿಸಿದ್ದರು. ಇದು ಯೋಗಿ ಆದಿತ್ಯನಾಥ್ ಸರಕಾರದ ಕಣ್ಣು ಕೆಂಪಾಗಿಸಿತು. ಸ್ವತಃ ಆಮ್ಲಜನಕವನ್ನು ತನ್ನ ಖರ್ಚಿನಲ್ಲಿ ತರಿಸಿ ಅವರು ಹಲವು ಮಕ್ಕಳ ಜೀವ ಉಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಎಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಬಳಿಕ ಕಫೀಲ್ ಖಾನ್ ಅವರನ್ನು ವೃತ್ತಿಯಿಂದ ಸಸ್ಪೆಂಡ್ ಮಾಡಿದುದಲ್ಲದೆ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ 9 ತಿಂಗಳ ಕಾಲ ಜೈಲಿಗೆ ಹಾಕಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth