ಪಾಕಿಸ್ತಾನದಲ್ಲಿ ಹಿಂದೂ ಕುಟುಂಬದ ಐವರ ಕತ್ತು ಸೀಳಿ ಭೀಕರ ಹತ್ಯೆ!
07/03/2021
ಇಸ್ಲಮಾಬಾದ್: ಹಿಂದೂ ಕುಟುಂಬವೊಂದರ ಐವರು ಸದಸ್ಯರನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಐವರ ಮೃತ ದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹರಿತವಾದ ಆಯುಧದಿಂದ ಕತ್ತು ಸೀಳಲಾಗಿದ್ದು, ಘಟನಾ ಸ್ಥಳದಿಂದ ಹರಿತವಾದ ಕತ್ತಿ ಹಾಗೂ ಗರಗಸವನ್ನು ಪಾಕಿಸ್ತಾನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯು ಪಾಕ್ ನಗರ ರಹೀಮ್ ಯಾರ್ ಖಾನ್ ನಿಂದ 15 ಕಿ.ಮೀ.ದೂರದ ಅಬುಧಾಬಿ ಕಾಲನಿಯಲ್ಲಿನ ನಿವಾಸದಲ್ಲಿ ನಡೆದಿದೆ.
ಮೃತಪಟ್ಟವರಲ್ಲಿ ಓರ್ವ 35 ವರ್ಷದ ರಾಮ್ ಚಂದ್ ಎಂದು ಗುರುತಿಸಲಾಗಿದ್ದು, ಈತ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ. ಈ ಕೃತ್ಯ ಯಾಕಾಗಿ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ. ಧಾರ್ಮಿಕ ಕಾರಣಕ್ಕಾಗಿ ನಡೆದ ಕೊಲೆ ಇದಲ್ಲ ಎಂದು ಹೇಳಲಾಗಿದೆ. ಈ ಹತ್ಯೆ ನಡೆಸಿದವರು ಯಾರು? ಮತ್ತು ಹತ್ಯೆ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ಪಾಕಿಸ್ತಾನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.