ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಬಜರಂಗದಳ, ವಿಎಚ್ ಪಿ ಸಂಚಾಲಕನ ಬಂಧನ - Mahanayaka
1:07 PM Thursday 12 - December 2024

ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಬಜರಂಗದಳ, ವಿಎಚ್ ಪಿ ಸಂಚಾಲಕನ ಬಂಧನ

08/03/2021

ಕೊಣಾಜೆ:  ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ಹಾಗೂ  ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ  ಸಂಚಾಲಕನನನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು- ಉಳ್ಳಾಲ ವ್ಯಾಪ್ತಿಯ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ನಡೆಸಲಾಗಿತ್ತು. ಇಲ್ಲಿನ ಮೊಂಟೆ ಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ  ಪ್ರಖಂಡ ತಾರನಾಥ್ ಮೋಹನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಮಧ್ಯರಾತ್ರಿ ಸಿಸಿ ಟಿವಿ ದೃಶ್ಯಗಳಿಂದ ತಾರನಾಥ್ ಮೋಹನ್ ನ ಕೃತ್ಯ ಬಯಲಾಗಿದೆ.  ಆರೋಪಿಯನ್ನು  ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಇತ್ತೀಚಿನ ಸುದ್ದಿ