ಕಳ್ಳರಂತೆ ಹಣ ಹಂಚಿಕೊಂಡ ಸಂಚಾರಿ ಪೊಲೀಸರು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ನವದೆಹಲಿ: ಬಡ ವಾಹನ ಚಾಲಕರನ್ನು ತಡೆದು, ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡಿ, ಬಳಿಕ ಕಳ್ಳರ ರೀತಿಯಲ್ಲಿ ಹಣಪಾಲು ಮಾಡಿಕೊಂಡ ಇಬ್ಬರು ಸಂಚಾರಿ ಪೊಲೀಸರು ಸಿಸಿ ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾಗಿದ್ದು, ಇದೀಗ ಇಬ್ಬರಿಗೂ ಪೊಲೀಸ್ ಇಲಾಖೆ ಗೇಟ್ ಪಾಸ್ ನೀಡಿದೆ.
ಪೊಲೀಸ್ ಚೆಕ್ ಪೋಸ್ಟ್ ಒಳಗೆ ವ್ಯಕ್ತಿಯೊಬ್ಬ ಬಂದು ಸ್ವಲ್ಪ ಹೊತ್ತು ಮಾತನಾಡುತ್ತಾನೆ. ಅಲ್ಲಿದ್ದ ಟೇಬಲ್ ನ ಡ್ರಾವರ್ ಓಪನ್ ಇರುತ್ತದೆ, ಅಲ್ಲಿಗೆ ಆ ವ್ಯಕ್ತಿ ಹಣವನ್ನು ಎಸೆದು ಸ್ಥಳದಿಂದ ಎಸ್ಕೇಪ್ ಆಗುತ್ತಾನೆ. ಆ ಹಣವನ್ನು ಪೊಲೀಸ್ ಪೇದೆ ತನ್ನ ಪರ್ಸ್ ಗೆ ಹಾಕಿಕೊಳ್ಳುತ್ತಾನೆ. ನಂತರ ಅದೇ ಚೆಕ್ ಪೋಸ್ಟ್ ಗೆ ಇನ್ನಿಬ್ಬರು ಪೇದೆಗಳು ಬರುತ್ತಾರೆ. ಬಳಿಕ ಮೂವರೂ ಹಣವನ್ನು ಹಂಚಿಕೊಂಡು ಆನಂದದಿಂದ ನಗುತ್ತಾ ಮಾತನಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಈ ಘಟನೆ ದೆಹಲಿಯ ಗಾಜಿಪುರದ ಥ್ರಿಲ್ ಲೌರಿ ವೃತ್ತದಲ್ಲಿ ನಡೆದಿದೆ. ವಿಡಿಯೋ ವೈರಲ್ ಆಗ್ತಿದ್ದಂತೆಯೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಇಬ್ಬರು ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್ಐ) ಮತ್ತು ಓರ್ವ ಹೆಡ್ ಕಾನ್ಸ್ಟೆಬಲ್ನನ್ನು ಅಮಾನತು ಮಾಡಲಾಗಿದೆ ಅಂತ ತಿಳಿಸಿದ್ದಾರೆ.
#Delhi #WATCH गाजीपुर थाने के सामने ट्रैफिक पुलिस वालों ने झौपड़ी को बनाया हुआ था उगाही का अड्डा। देखें कैसे लोगों को वहां लाकर लेते थे रिश्वत, फिर कमाई को आपस में बांट लेते थे। आरोपी ट्रैफिक पुलिसकर्मी कल्याणपुरी सर्कल के हैं।@SandhyaTimes4u @NBTDilli @CPDelhi #DelhiPolice pic.twitter.com/7i7yYR2JlB
— Kunal Kashyap (@kunalkashyap_st) August 17, 2024
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth