ಇಸ್ರೇಲ್ ದಾಳಿ ಬೆದರಿಕೆ: ಅಲ್ ಕಸ್ಸಾಮ್ ಬ್ರಿಗೇಡ್ ನ ಮುಖ್ಯಸ್ಥ ದೈಫ್ ಸುರಕ್ಷಿತ; ಹಮಾಸ್ - Mahanayaka
7:45 PM Thursday 26 - December 2024

ಇಸ್ರೇಲ್ ದಾಳಿ ಬೆದರಿಕೆ: ಅಲ್ ಕಸ್ಸಾಮ್ ಬ್ರಿಗೇಡ್ ನ ಮುಖ್ಯಸ್ಥ ದೈಫ್ ಸುರಕ್ಷಿತ; ಹಮಾಸ್

19/08/2024

ತಾನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿಕೊಂಡಿರುವ ಹಮಾಸ್ ನ ಸಶಸ್ತ್ರ ವಿಭಾಗವಾದ ಅಲ್ ಕಸ್ಸಾಮ್ ಬ್ರಿಗೇಡ್ ನ ಮುಖ್ಯಸ್ಥ ಮುಹಮ್ಮದ್ ದೈಫ್ ಅವರು ಸುರಕ್ಷಿತವಾಗಿದ್ದಾರೆ ಎಂದು ಹಮಾಸ್ ಹೇಳಿದೆ. ತನ್ನ ಅತಿಕ್ರೂರ ದಾಳಿಯನ್ನು ಸಮರ್ಥಿಸುವುದಕ್ಕಾಗಿ ಅದು ಮುಹಮ್ಮದ್ ದೈಫ್ ಅವರ ಹತ್ಯೆಯ ಬಗ್ಗೆ ಸುಳ್ಳು ವದಂತಿಯನ್ನು ಹಬ್ಬಿಸುತ್ತಿದೆ ಎಂದು ಹಮಾಸ್ ಹೇಳಿದೆ.

ಖಾನ್ ಯೂನಿಸ್ ನಲ್ಲಿ ಜುಲೈ 13ರಂದು ನಡೆಸಲಾದ ಅಕ್ರಮಣದಲ್ಲಿ ಮೊಹಮ್ಮದ್ ದೈಫ್ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿತ್ತು. ಜುಲೈ 13ರ ಆ ದಾಳಿಯಲ್ಲಿ ಅನೇಕ ಫೆಲಸ್ತೀನಿಯರುಹತ್ಯೆಗೀಡಾಗಿದ್ದರು. ಆ ಹತ್ಯೆಯನ್ನು ಸಮರ್ಥಿಸುವುದಕ್ಕಾಗಿ ಇದೀಗ ಮಹಮ್ಮದ್ ದೈಫ್ ಹತ್ಯೆಯ ಕಥೆಯನ್ನು ಇಸ್ರೆಲ್ ಹೇಳುತಿದೆ ಎಂದು ಹಮಾಸ್ ಹೇಳಿದೆ.

ಇಸ್ಮಾಯಿಲ್ ಹನಿಯ್ಯ ಅವರನ್ನು ಇರಾನ್ ನಲ್ಲಿ ಹತ್ಯೆ ಮಾಡಿದ ಬೆನ್ನಿಗೆ ಇಸ್ರೇಲ್ ಮೊಹಮ್ಮದ್ ದೈಫ್ ಹತ್ಯೆಯ ಬಗ್ಗೆಯೂ ಹೇಳಿಕೊಂಡಿತ್ತು. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆಸಿದ ಹಮಾಸ್ ದಾಳಿಯ ಹಿಂದೆ ಮಹಮ್ಮದ್ ದೈಫ್ ಪ್ರಮುಖ ಪಾತ್ರವಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ