ಕುಮಾರಸ್ವಾಮಿ ಅವರನ್ನ ಬಂಧಿಸಲು ಒಬ್ಬ ಪಿಸಿ ಸಾಕು: ಸಿಎಂ ಸಿದ್ದರಾಮಯ್ಯ ತಿರುಗೇಟು - Mahanayaka
11:22 AM Thursday 6 - February 2025

ಕುಮಾರಸ್ವಾಮಿ ಅವರನ್ನ ಬಂಧಿಸಲು ಒಬ್ಬ ಪಿಸಿ ಸಾಕು: ಸಿಎಂ ಸಿದ್ದರಾಮಯ್ಯ ತಿರುಗೇಟು

siddaramaiah
21/08/2024

ವಿಜಯಪುರ: ಹೆಎಚ್.ಡಿ. ಕುಮಾರಸ್ವಾಮಿ ಅವರನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬೇಡ, ಒಬ್ಬ ಪಿಸಿ ಸಾಕು ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬಂದರೂ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರನ್ನು ಬಂಧಿಸಲು ನಾನು ಯಾರು? ಬಂಧಿಸುವುದು ಪೊಲೀಸರ ಕೆಲಸ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರ ವಿರುದ್ಧ ರಾಜ್ಯಪಾಲರ ಬಳಿ ಈ ಹಿಂದೆಯೇ ದೂರು ದಾಖಲಾಗಿದ್ದು, ಅದರ ತನಿಖೆ ಆರಂಭಗೊಳ್ಳಲಿದೆ ಎಂದು ಹೆದರಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದರು.

ಕುಮಾರಸ್ವಾಮಿ ಕೇವಲ ಹಿಟ್ ಆಂಡ್ ರನ್ ಮಾತ್ರ, ಆಗ ನಾನು ಯಾವ ಅಧಿಕಾರದಲ್ಲೂ ಇರಲಿಲ್ಲ, ಮುಡಾದಲ್ಲಿ ಆಗ ಬಿಜೆಪಿಯವರೇ ಅಧ್ಯಕ್ಷರಾಗಿದ್ದವರು, ಆಗ ಮುಖ್ಯಮಂತ್ರಿಯಾಗಿದ್ದವರು ಮಿಸ್ಟರ್ ಬೊಮ್ಮಾಯಿ ಎಂದರು.

ಈ ಹಿಂದೆಯೂ ಪೆನ್ ಡ್ರೈವ್ ಇದೆ ಎಂದು ಹೇಳುತ್ತಿದ್ದರು ಆಮೇಲೆ ಏನಾಯ್ತು? ಎಂದು ಪ್ರಶ್ನಿಸಿದರು.

ಮುಡಾದಲ್ಲಿ ನನ್ನ ಪಾತ್ರವೇ ಇಲ್ಲ – ದಾಖಲೆಯೂ ತಿದ್ದಿಲ್ಲ: ಮುಡಾ ಹಗರಣದಲ್ಲಿ ನನ್ನ ಯಾವ ಪಾತ್ರ, ಪ್ರಭಾವವೂ ಇಲ್ಲ, ಯಾವ ದಾಖಲೆಯನ್ನೂ ತಿದ್ದಿಲ್ಲ, ವೈಟನರ್ ಹಚ್ಚಿ ದಾಖಲೆ ತಿದ್ದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ