ಕಿವಿಯಲ್ಲಿ ಬೆಂಡೋಲೆ ಧರಿಸಿರುವ ಈ ಕೋಳಿಯ ಕಥೆ ಏನು ಗೊತ್ತಾ? - Mahanayaka
10:23 AM Thursday 12 - December 2024

ಕಿವಿಯಲ್ಲಿ ಬೆಂಡೋಲೆ ಧರಿಸಿರುವ ಈ ಕೋಳಿಯ ಕಥೆ ಏನು ಗೊತ್ತಾ?

09/03/2021

ಕೇರಳ: ಮಕ್ಕಳಿಗೆ ಕಿವಿ ಚುಚ್ಚಿ ಕಿವಿಗೆ ಬೆಂಡೋಲೆ ಹಾಕಿ ಸಂಭ್ರಮಿಸುವುದನ್ನು ನೀವು ನೋಡಿದ ಬಹುದು ಆದರೆ ಇಲ್ಲಿಬ್ಬರು ದಂಪತಿಯ ಮುದ್ದಿನ ಕೋಳಿ ರಾಮುಗೆ ಕಿವಿ ಚುಚ್ಚಲಾಗಿದ್ದು, ಕೊಥೋಕೋಜಿ ಕುಲ ಸೇರಿದ ಕೋಳಿ ಇದೀಗ ಆಕರ್ಷಣಿಯ ಬಿಂದುವಾಗಿದೆ.

ಕಿಲ್ಲಿಮಂಗಲಂ ಕಲಪ್ಪುರಂಠತ್ತಲ್ ರೀಟಾ, ಸ್ಯಾಮ್ ವರ್ಗೀಸ್ ಅವರ ಮನೆಯಲ್ಲಿರುವ ಕೋಳಿಗೆ ಕವಿ ಚುಚ್ಚಲಾಗಿದ್ದು,  ಒಂದು ವರ್ಷದ ಹಿಂದೆ ತಮಿಳುನಾಡಿನಿಂದ ಈ ಕೋಳಿಯನ್ನು ತಂದಿದ್ದರು. ಮನೆಯವರ ಪ್ರೀತಿಗೆ ಪಾತ್ರವಾದ ರಾಮು, ಮನೆಯ ಒಬ್ಬ ಸದಸ್ಯನಾಗಿದ್ದಾನೆ.

ಸ್ಯಾಮ್ ವರ್ಗಿಸ್ ಅವರು ರಾಮುವಿಗೆ ಕಿವಿಯೋಲೆ ಹಾಕಬೇಕು ಎಂದು ಯೋಚಿಸಿ ಸಹಾಯಕರಾಗಿರುವ ಪಂಡಿತ್ ಎಂಬವರ ಬಳಿಯಲ್ಲಿ ಸಲಹೆ ಕೇಳಿದ್ದಾರೆ.  ಈ ವೇಳೆ ಅವರು, “ಕೋಳಿಯ ಬಾಲ ಮತ್ತು ತಲೆ ಕೋಳಿಯ ಗಾತ್ರದಷ್ಟೇ ಇದ್ದರೆ, ಕಿವಿಯೋಲೆ ಹಾಕಬಹುದು ಎಂದು ಸಲಹೆ ನೀಡಿದ್ದರು.

ಪಂಡಿತ್ ಸಲಹೆ ಪಡೆದ ಸ್ಯಾಮ್ ಅವರು, ಅರಿಶಿನ ಮತ್ತು ಉಪ್ಪು ನೀರಿನೊಂದಿಗೆ  ಬೆರೆಸಿದ ಲಿಂಬೆ ರಸವನ್ನು ಬಳಸಿಕೊಂಡು ರಾಮುವಿನ ಕಿವಿ ಚುಚ್ಚಿದ್ದಾರೆ. ಸದ್ಯ ರಾಮು ಸ್ಯಾಮ್ ಅವರ ಮನೆಯಲ್ಲಿರುವ 12 ಕೋಳಿಗಳಿಗೆ ಹೆಡ್ ಮಾಸ್ಟರ್ ಆಗಿದ್ದಾನೆ.

ಇತ್ತೀಚಿನ ಸುದ್ದಿ