ಕಾಂಗ್ರೆಸ್ ಮತ್ತು ಪ್ರಗತಿಪರರಿಗೆ ಭ್ರಷ್ಟಾಚಾರದಲ್ಲಿ ಪಾಲು: ಜೆ.ಎಸ್.ರಘು ಆರೋಪ - Mahanayaka

ಕಾಂಗ್ರೆಸ್ ಮತ್ತು ಪ್ರಗತಿಪರರಿಗೆ ಭ್ರಷ್ಟಾಚಾರದಲ್ಲಿ ಪಾಲು: ಜೆ.ಎಸ್.ರಘು ಆರೋಪ

JS Raghu
22/08/2024

ಮೂಡಿಗೆರೆ: ಸಂವಿಧಾನದ ಹೆಸರಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಮತ್ತು ಪ್ರಗತಿಪರರು ಪ್ರತಿಭಟಿಸಿ ತಮ್ಮ ಪಾಲಿಗಾಗಿ ಭ್ರಷ್ಟಾಚಾರ ಬೆಂಬಲಿಸುತ್ತಿರುವುದು ನಾಡಿನ ಜನತೆಗೆ ಹಾಗೂ ಎಸ್ಸಿ ಎಸ್ಟಿಗಳಿಗೆ ಮಾಡುತ್ತಿರುವ ದ್ರೋಹ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಜೆ.ಎಸ್. ರಘು ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದು, ಮೈಸೂರಿನ ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಎಸ್.ಐ.ಪರಶುರಾಮ್ ಆತ್ಮಹತ್ಯೆ, ಅಧಿಕಾರಿಗಳ ವರ್ಗಾವಣೆ ದಂಧೆ ಸೇರಿದಂತೆ ಗ್ಯಾರಂಟಿ ಹೆಸರಲ್ಲಿ ಎಸ್ ಸಿ ಎಸ್ ಟಿ ಗಳಿಗೆ ಮೀಸಲಿಟ್ಟ 24,000 ಕೋಟಿ ದುರುಪಯೋಗ ಇವೆಲ್ಲವೂ ಭ್ರಷ್ಟಾಚಾರದ ಕೋಪಕ್ಕೆ ಸೇರಿಸಿದ್ದು. ಬಡವರಿಗೆ ಹಂಚಬೇಕಾದ ನಿವೇಶನವನ್ನೇ ಮುಖ್ಯಮಂತ್ರಿ ಕೊಳ್ಳೆ ಹೊಡೆದಿರುವುದು ಅಲ್ಲದೆ ಮಂತ್ರಿ ನಾಗೇಂದ್ರ ಜೈಲಲ್ಲಿರುವುದು. ನಿಮ್ಮ ಅಭಿವೃದ್ಧಿ ಶೂನ್ಯ ಆಡಳಿತ ಎಲ್ಲವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದಿದ್ದಾರೆ.

ರಾಜ್ಯದ ನೆಲ ಜಲ ಸಂಸ್ಕೃತಿ ರಕ್ಷಣೆಗೆ ನಿಲ್ಲಬೇಕಾದ ಬುದ್ಧಿಜೀವಿಗಳು ಎನಿಸಿಕೊಂಡವರು ಕಾಂಗ್ರೆಸ್ ಆಫೀಸಿನಲ್ಲಿ ಸೇರಿಕೊಂಡು ಅಹಿಂದ ಹೆಸರಲ್ಲಿ ಲೂಟಿಗೆ ಆಸ್ಪದ ನೀಡುವ ಹೇಳಿಕೆ ನೀಡುತ್ತಿರುವುದು ಭ್ರಷ್ಟಾಚಾರದಲ್ಲಿ ನಿಮಗೂ ಪಾಲು, ದೊರೆತಿದೆ ಎಂಬುದಕ್ಕೆ ಪುಷ್ಠಿಯಾಗಿದ್ದು, ಇದರೊಂದಿಗೆ ನಿಮ್ಮ ಕರ್ನಾಟಕ ನೆಲದ ರಕ್ಷಣೆಯ ಸೋಗು ಬಯಲಾಗಿದೆ. ಅಲ್ಲದೆ ದಲಿತ ರಾಜ್ಯಪಾಲರ ವಿರುದ್ಧ ದಂಗೆಗೆ ಪ್ರೇರೇಪಿಸುತ್ತಿರುವ ಪಾಕಿಸ್ತಾನದ ಏಜೆಂಟ್ ನಂತೆ ವರ್ತಿಸುತ್ತಿರುವ ಐವಾನ್ ಡಿಸೋಜ, ಜಮೀರ್ ಅಹ್ಮದ್ ಇವರುಗಳನ್ನು ಬಂಧಿಸಬೇಕು ಮತ್ತು ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ