ಕೋಲ್ಕತ್ತಾ ರೇಪ್ ಪ್ರಕರಣ: ಬಂಧಿತನ ಬಗ್ಗೆ ಸಹೋದರಿ ಅಚ್ಚರಿಯ ಹೇಳಿಕೆ..!
ಕೋಲ್ಕತ್ತಾ ವೈದ್ಯೆಯನ್ನು ಹತ್ಯೆಗೈದ ಆರೋಪದಲ್ಲಿ ಬಂಧಿತನಾಗಿರುವ ಸಂಜಯ್ ರಾಯ್ ನ ಬಗ್ಗೆ ಆತನ ಸಹೋದರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕಳೆದ 17 ವರ್ಷಗಳಿಂದ ತಾನು ತನ್ನ ಸಹೋದರನ ಜೊತೆ ಮಾತನಾಡಿಲ್ಲ ಎಂದಾಕೆ ಹೇಳಿದ್ದಾರೆ. ನಾವಿಬ್ಬರೂ ಪರಸ್ಪರ ಭೇಟಿಯಾಗಿ ವರ್ಷವೇ ಕಳೆದಿದೆ ಎಂದು ಕೂಡ ಆಕೆ ಹೇಳಿದ್ದಾರೆ.
ನಾವಿಬ್ಬರೂ ಪರಸ್ಪರ ಭೇಟಿಯಾಗುತ್ತಿಲ್ಲ. ಆದ್ದರಿಂದ ಆತನ ಬಗ್ಗೆ ನನಗೆ ಹೇಳುವುದಕ್ಕೆ ಏನೂ ಇಲ್ಲ. ಬಾಲ್ಯಕಾಲದಲ್ಲಿ ಆತ ಎಲ್ಲರಂತೆ ಸಾಮಾನ್ಯವಾಗಿದ್ದ. ಪೊಲೀಸ್ ಕೆಲಸವಗಿರುವುದರಿಂದ ರಾತ್ರಿ ಅಥವಾ ಹಗಲು ಆತ ಕರ್ತವ್ಯ ನಿರತನಾಗಿರಬಹುದು. ಆತನನ್ನು ನೋಡಿ ವರ್ಷಗಳಾಗಿವೆ. ಆತ ಈ ಮೊದಲು ಕೆಟ್ಟ ಕೃತ್ಯ ನಡೆಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಆತ ಅಪರಾಧ ಎಸಗಿದ್ದಾನೆ ಎಂಬುದು ನಿಜವೇ ಆಗಿದ್ದರೆ ಆತನಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಎ ಏನ್ ಐ ಜೊತೆ ಮಾತಾಡುತ್ತಾ ಸಹೋದರಿ ಹೇಳಿದ್ದಾರೆ.
ಕಳೆದ ಆಗಷ್ಟು 9ರಂದು ಪಿಜಿ ಟ್ರೈನಿ ಡಾಕ್ಟರ್ ಆಗಿದ್ದ ಯುವತಿಯನ್ನು ಆರ್ ಜೆ ಕಾರ್ ಮೆಡಿಕಲ್ ಕಾಲೇಜಿನಲ್ಲಿ ರೇಪ್ ಮಾಡಿ ಹತ್ಯೆ ಮಾಡಲಾಗಿತ್ತು. ಈತನನ್ನು ಪೊಲೀಸರು ವಶಪಡಿಸಿದ ಬಳಿಕ ಆತನ ಶೂನಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು. ತನ್ನ ಕೃತ್ಯದ ವೇಳೆ ತಾನು ಧರಿಸಿದ್ದ ಬಟ್ಟೆಯನ್ನು ಆತ ಒಗೆಯುವ ಮೂಲಕ ಸಾಕ್ಷ ನಾಶಕ್ಕೆ ಪ್ರಯತ್ನಿಸಿದ್ದ. ಮಾತ್ರ ಅಲ್ಲ ಪೊಲೀಸರು ಆತನ ಮನೆ ಪ್ರವೇಶಿಸುವಾಗ ಕುಡಿದ ಮತ್ತಿನಲ್ಲಿದ್ದ ಎಂದು ಕೂಡ ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth